ನವದೆಹಲಿ: ಭಾರತದ ಮುರಳಿ ಶ್ರೀಶಂಕರ್ ಅವರು ಪೋರ್ಚುಗಲ್‌ನಲ್ಲಿ ನಡೆದ ಮಯಾ ಸಿಡೇಡ್ ಡು ಡೆಸ್ಪೊರ್ಟೊ ಇನ ಮಯಾ ಕೂಟದಲ್ಲಿ ಪ್ರಶಸ್ತಿ ಗಳಿಸಿದರು.
ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟರ್ ಟೂರ್ ಕಂಚಿನ ಪದಕ ಮಟ್ಟದ ಕೂಟ ಇದಾಗಿದೆ. ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿತೇತ ಶ್ರೀಶಂಕರ್ ಅವರು ಶನಿವಾರ ತಡರಾತ್ರಿ ನಡೆದ ಪುರುಷರ ವಿಭಾಗದ ಲಾಂಗ್ ಜಂಪ್‌ನಲ್ಲಿ 7.75 ಮೀಟರ್ಸ್ ದೂರ ಜಿಗಿದು ಪ್ರಶಸ್ತಿ ಗಳಿಸಿದರು.
ಶ್ರೀಶಂಕರ್ ಅವರು ತಮ್ಮ ಮೊದಲ ಜಂಪ್‌ನಲ್ಲಿ 7.63 ಮೀ ದೂರ ಜಿಗಿದರು. ತಮ್ಮ ಎರಡನೇ ಪ್ರಯತ್ನದಲ್ಲಿಯೇ ಅವರು ಗೆಲುವನ್ನು (7.75ಮೀ)ಖಚಿತಪಡಿಸಿಕೊಂಡರು ಮತ್ತು ನಂತರದಲ್ಲಿ (ಟೈ ಬ್ರೇಕರ್)7.69 ಮೀ ಸಾಧನೆ ಮಾಡಿದತು. ನಂತರದ ಸುತ್ತಿನಲ್ಲಿ ಫೌಲ್ ಆಯಿತು. ಕೊನೆಯ ಎರಡು ಜಿಗಿತಗಳಲ್ಲಿ ಅವರು ಕ್ರಮವಾಗಿ 6.12 ಮೀ ಮತ್ತು 7.58 ಮೀ ಸಾಧನೆ ಮಾಡಿದರು.
ಪೋಲೆಂಡ್‌ನ ಪಿಯೊಟರ್ ತರ್ಕೋವಸ್ಕಿ ಅವರು ಕೂಡ 7.75 ಮೀ ಜಿಗಿತ ದಾಖಲಿಸಿ ಶ್ರೀಶಂಕರ್ ದಾಖಲೆ ಸಮ ಮಾಡಿದರು. ಆದರೆ, ಅವರ ಶ್ರೇಷ್ಠ ಜಂಪ್ 7.58 ಮೀ ಆಗಿತ್ತು. ಅದೇ ಭಾರತದ ಶ್ರೀಶಂಕರ್ ಅವರದ್ದು 7.69 ಮೀ ಆಯಿತು.
ಇಬ್ಬರು ಅಥ್ಲೀಟ್‌ಗಳ ಫಲಿತಾಂಶವು ಟೈ ಆದ ಸಂದರ್ಭದಲ್ಲಿ ಅವರಿಬ್ಬರೂ ಸಾಧಿಸಿದ ಜಿಗಿತಗಳ ಫಲಿತಾಂಶದಲ್ಲಿ ಎರಡನೇಯ ಶ್ರೇಷ್ಠ ಸಾಧನೆಯನ್ನು ಟೈಬ್ರೇಕರ್‌ಗೆ ಪರಿಗಣಿಸಲಾಗುತ್ತದೆ.
ಕೇರಳದ ಶ್ರೀಶಂಕರ್ ಅವರು ಮುಂಬರುವ ಯುರೋಪ್ ಮತ್ತು ಸೆಂಟ್ರಲ್ ಏಷ್ಯಾ ಕೂಟಗಳಲ್ಲಿ ಭಾಗವಹಿಸುವ ಅವಕಾಶ ನೀಡಲಾಗುತ್ತದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.