ADVERTISEMENT

ಪ್ಯಾರಿಸ್‌ ಒಲಿಂಪಿಕ್ಸ್‌ ಈಜು: ಸೆಮಿ ತಲುಪಲು ಶ್ರೀಹರಿ ನಟರಾಜ್‌, ಧಿನಿಧಿ ವಿಫಲ

ಒಲಿಂಪಿಕ್ಸ್‌ ಈಜು: ಹೀಟ್ಸ್‌ ಹಂತದಲ್ಲಿ ನಿರ್ಗಮನ

ಪಿಟಿಐ
Published 28 ಜುಲೈ 2024, 13:32 IST
Last Updated 28 ಜುಲೈ 2024, 13:32 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಪ್ಯಾರಿಸ್‌: ಭಾರತದ ಶ್ರೀಹರಿ ನಟರಾಜ್ ಮತ್ತು ಧಿನಿಧಿ ದೇಸಿಂಗು ಅವರು ಭಾನುವಾರ ನಡೆದ ಒಲಿಂಪಿಕ್ಸ್‌ ಈಜು ಸ್ಪರ್ಧೆಗಳ ಹೀಟ್ಸ್‌ನಲ್ಲೇ ಹೊರಬಿದ್ದರು.

ಬೆಂಗಳೂರಿನ ಈಜುಪಟು ಶ್ರೀಹರಿ, ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯನ್ನು 55.01 ಸೆ.ಗಳಲ್ಲಿ ಪೂರೈಸಿದರು. ಅವರು ಈ ವಿಭಾಗದ ಹೀಟ್ಸ್‌ ಮುಗಿದ ನಂತರ ಒಟ್ಟಾರೆ 33ನೇ ಸ್ಥಾನ ಪಡೆದರು. ವೇಗವಾಗಿ ಈಜಿದ ಮೊದಲ 16 ಈಜುಪಟುಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತಾರೆ.

ADVERTISEMENT

ಇದು ನಟರಾಜ್ ಅವರ ವೈಯಕ್ತಿಕ ಶ್ರೇಷ್ಠ ಅವಧಿಗಿಂತ (53.77 ಸೆ.) ಕಡಿಮೆ ಮಟ್ಟದ ಪ್ರದರ್ಶನ ಎನಿಸಿತು. ಈ ವರ್ಷದ ಅವರ ಉತ್ತಮ ಅವಧಿಯನ್ನು (54.68 ಸೆ.) ಮೀರಿ ನಿಲ್ಲಲು ಅವರು ವಿಫಲರಾದರು.

ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ 14 ವರ್ಷದ ಧಿನಿಧಿ ದೇಸಿಂಗು ಮಹಿಳೆಯರ 200 ಮೀ. ಫ್ರೀಸ್ಟೈಲ್‌ನ ತಮ್ಮ ಹೀಟ್ಸ್‌ನಲ್ಲಿ ಮೊದಲ ಸ್ಥಾನ ಪಡೆದರು. ಹೀಟ್‌1ನಲ್ಲಿ (ಇದು ನಿಧಾನಗತಿಯ ಹೀಟ್‌) ಧಿನಿಧಿ 2ನಿ.06.96 ಸೆ.ಗಳಲ್ಲಿ ಈಜು ಪೂರೈಸಿದರು. ಅದರೆ ಅವರು 30 ಸ್ಪರ್ಧಿಗಳಲ್ಲಿ 23ನೇ ಸ್ಥಾನ ಗಳಿಸಿದರು. ಬೆಂಗಳೂರಿನ ಈಜುಗಾರ್ತಿ ಭಾರತ ತಂಡದ ಅತಿ ಕಿರಿಯ ಕ್ರೀಡಾಪಟು ಎನಿಸಿದ್ದರು.

ಈ ಸ್ಪ‍ರ್ಧಿಗಳಲ್ಲಿ ಮೂರು ಬಾರಿಯ ಒಲಿಂಪಿಕ್‌ ಚಾಂಪಿಯನ್, ಆಸ್ಟ್ರೇಲಿಯಾದ ಅರಿಯಾರ್ನ್‌ ಟಿಟ್ಮಸ್‌ ಒಳಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.