ಬೆಳಗಾವಿ: ಬಾಗಲಕೋಟೆ ಹಾಗೂ ವಿಜಯಪುರದ ಸೈಕ್ಲಿಸ್ಟ್‌ಗಳು ಭಾನುವಾರ ಇಲ್ಲಿ ಮುಕ್ತಾಯಗೊಂಡ 16ನೇ ರಾಜ್ಯ ರಸ್ತೆ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನ ಮಾಸ್ಡ್ ಸ್ಟಾರ್ಟ್‌ನಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದರು.
ಪುರುಷರ ವಿಭಾಗದಲ್ಲಿ ಬಾಗಲಕೋಟೆ ತಂಡ 27 ಅಂಕ ಗಳಿಸಿ ಟ್ರೋಫಿ ಗೆದ್ದುಕೊಂಡಿತು. ವಿಜಯಪುರ ತಂಡ 16 ಅಂಕಗಳೊಂದಿಗೆ ರನ್ನರ್‌ಅಪ್ ಆಯಿತು.
ಮಹಿಳೆಯರ ವಿಭಾಗದಲ್ಲಿ 19 ಅಂಕಗಳ ಮೂಲಕ ವಿಜಯಪುರ ತಂಡ ಚಾಂಪಿಯನ್ ಆದರೆ, 11 ಅಂಕ ಪಡೆದ ಗದಗ ತಂಡ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಫಲಿತಾಂಶ: 16 ವರ್ಷದೊಳಗಿನ ಬಾಲಕರು: 20 ಕಿ.ಮೀ: ಬಸವರಾಜ ಕರಡ್ಡಿ (ವಿಜಯಪುರ)–1, ವೀರೇಶ ಬೆಳಗಲಿ (ಯಾದಗಿರಿ)–2, ಪುನೀತ್ ಬಿರಾದಾರ (ಕ್ರೀಡಾ ನಿಲಯ, ವಿಜಯಪುರ)–3.
23 ವರ್ಷದೊಳಗಿನವರು: 80 ಕಿ.ಮೀ: ವರುಣ ಶಿರೂರ (ಬಾಗಲಕೋಟೆ)–1, ಮನೋಜ್ ಬಾಟಿ (ಯಾದಗಿರಿ)–2, ಮಲ್ಲಿಕಾರ್ಜುನ ಯಾದವಾಡ (ಬಾಗಲಕೋಟೆ)–3.
ಪುರುಷರು: 80 ಕಿ.ಮೀ: ಸುಜಲ್ ಜಾಧವ (ವಿಜಯಪುರ)–1, ಶ್ರೀಶೈಲ ವೀರಾಪುರ (ಬಾಗಲಕೋಟೆ)–2, ವೈಶಾಖ ಕೆ.ವಿ. (ಮೈಸೂರು)–3.
18 ವರ್ಷದೊಳಗಿನ ಬಾಲಕರು: 3 ಲ್ಯಾಪ್ಸ್ ಮಾಸ್ಡ್ ಸ್ಟಾರ್ಟ್: ಮಹೇಶ ಬಡಿಗೇರ (ಬಾಗಲಕೋಟೆ)–1, ಹಣಮಂತ ಹುಲ್ಲಿಕೇರಿ (ಯಾದಗಿರಿ)–2, ಶ್ರೀನಿವಾಸ ರಜಪೂತ (ಕ್ರೀಡಾ ನಿಲಯ, ವಿಜಯಪುರ)–3.
14 ವರ್ಷದೊಳಗಿನ ಬಾಲಕರು: 1 ಲ್ಯಾಪ್ ಮಾಸ್ಡ್ ಸ್ಟಾರ್ಟ್: ಸಿದ್ಧಲಿಂಗ ಜಕ್ಕಣ್ಣವರ (ಬಾಗಲಕೋಟೆ)–1, ಅರ್ಜುನ ಕಲಾಲ (ಧಾರವಾಡ)–2, ಬಸವರಾಜ ಯಳಮೇಟಿ (ಕ್ರೀಡಾ ನಿಲಯ, ವಿಜಯಪುರ)–3.
ಮಹಿಳೆಯರು: 40 ಕಿ.ಮೀ: ಗ್ಲೆಯೋನಾ ಡಿಸೋಜಾ (ಉಡುಪಿ)–1, ನಂದಾ ಚಿಚಖಂಡಿ (ಬಾಗಲಕೋಟೆ)–2, ಕೀರ್ತಿ ನಾಯಕ (ಧಾರವಾಡ)–3.
18 ವರ್ಷದೊಳಗಿ ಬಾಲಕಿಯರು: 1 ಲ್ಯಾಪ್ ಮಾಸ್ಡ್ ಸ್ಟಾರ್ಟ್: ಛಾಯಾ ನಾಗಶೆಟ್ಟಿ (ವಿಜಯಪುರ)–1, ಕೋಕಿಲಾ ಚವ್ಹಾಣ (ವಿಜಯಪುರ)–2, ಜ್ಯೋತಿ ರಾಠೋಡ (ಕ್ರೀಡಾ ನಿಲಯ, ವಿಜಯಪುರ)–3.
16 ವರ್ಷದೊಳಗಿನ ಬಾಲಕಿಯರು: 1 ಲ್ಯಾಪ್ ಮಾಸ್ಡ್ ಸ್ಟಾರ್ಟ್: ದೀಪಿಕಾ ಫಡತಾರೆ (ವಿಜಯಪುರ)–1, ಮಧು ಬೆಂಡಿಗೇರಿ (ಕ್ರೀಡಾ ನಿಲಯ, ಬಾಗಲಕೋಟೆ)–2, ಗಾಯತ್ರಿ ಕಿತ್ತೂರ (ಬಾಗಲಕೋಟೆ)–3.
14 ವರ್ಷದೊಳಗಿನ ಬಾಲಕಿಯರು: 1 ಲ್ಯಾಪ್ ಮಾಸ್ಡ್ ಸ್ಟಾರ್ಟ್: ಪ್ರಿಯಾಂಕ ಲಮಾಣಿ (ಕ್ರೀಡಾ ನಿಲಯ, ಗದಗ)–1, ವಿದ್ಯಾ ಲಮಾಣಿ (ಕ್ರೀಡಾ ನಿಲಯ, ಬಾಗಲಕೋಟೆ)–2, ಭಾಗ್ಯ ಮೇಲ್ಮನಿ (ಕ್ರೀಡಾ ನಿಲಯ, ಗದಗ)–3.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.