ಮಂಗಳೂರು: ನಗರದ ಮಂಗಳಾ ಈಜು ಕ್ಲಬ್‌ನ ವಾಫಿ ಅಬ್ದುಲ್ ಹಕೀಮ್ ಅವರು ಜೈ ಹಿಂದ್ ಈಜುಕೇಂದ್ರ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಬೈ–ಫಿನ್ ಈಜು ಸ್ಪರ್ಧೆಯಲ್ಲಿ ಪುರುಷರ ವಿಭಾಗದ ವೈಯಕ್ತಿಕ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು. ಮಂಗಳಾ ಈಜು ಕ್ಲಬ್‌ನ ವೈಷ್ಣವಿ ಕುಡ್ವ ಹಾಗೂ ಹಾಸನದ ಹಾಸನಾಂಬ ಈಜು ಕ್ಲಬ್‌ನ ದೇಶ್ನಾ ಪಿ.ಶೆಟ್ಟಿ ಮಹಿಳೆಯರ ವಿಭಾಗದ ಚಾಂಪಿಯನ್‌ಷಿಪ್ ಹಂಚಿಕೊಂಡರು.
ನಗರಪಾಲಿಕೆ ಈಜುಕೊಳದಲ್ಲಿ ನಡೆದ ಸ್ಪರ್ಧೆಯ ಮುಕ್ತ ವಿಭಾಗದ 100 ಮೀಟರ್ಸ್ ಫ್ರೀಸ್ಟೈಲ್, 200 ಮೀ ಫ್ರೀ ಸ್ಟೈಲ್ ಮತ್ತು 400 ಮೀ ಫ್ರೀಸ್ಟೈಲ್‌ನಲ್ಲಿ ವಾಫಿ ಚಿನ್ನ ಗೆದ್ದುಕೊಂಡರು. ಅವರು ನಗರದ ಸೇಂಟ್ ಅಲೋಶಿಯಸ್ ಕಾಲೇಜು ವಿದ್ಯಾರ್ಥಿ. ಹಾಸನದ ಸುಜಲಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ದೇಶ್ನಾ 50 ಮೀ ಫ್ರೀಸ್ಟೈಲ್ ಹಾಗೂ 100 ಮೀ ಫ್ರೀಸ್ಟೈಲ್‌ನಲ್ಲಿ ಚಿನ್ನ, 200 ಮೀ ಫ್ರೀಸ್ಟೈಲ್‌ನಲ್ಲಿ ಬೆಳ್ಳಿ ಗಳಿಸಿದರು. ವೈಷ್ಣವಿ ಕುಡ್ವ ಅವರೂ ಪಾಲ್ಗೊಂಡ ಮೂರೂ ಸ್ಪರ್ಧೆಗಳಲ್ಲಿ ಪದಕ ಗೆದ್ದುಕೊಂಡರು. 200 ಮೀ ಫ್ರೀಸ್ಟೈಲ್ ಮತ್ತು 400 ಮೀ ಫ್ರೀಸ್ಟೈಲ್‌ನಲ್ಲಿ ಚಿನ್ನ, 50 ಮೀ ಫ್ರೀಸ್ಟೈಲ್‌ನಲ್ಲಿ ಬೆಳ್ಳಿ ಪದಕ ಅವರ ಪಾಲಾಯಿತು.
ಬಾಲಕರ ಗುಂಪು 2ರಲ್ಲಿ ನಿಹಾಲ್ ಪೂಜಾರಿ, ಗುಂಪು 3ರಲ್ಲಿ ಯತಿನ್ ಎಂ.ಎನ್, ಗುಂಪು 4ರಲ್ಲಿ ನೋಹ್ ಜೋ ಪಾಯಸ್ ಮತ್ತು 5ರಲ್ಲಿ ಮಿಹಿರ್ ಕೆ, ಬಾಲಕಿಯರ ಗುಂಪು 2ರಲ್ಲಿ ಲಾಸ್ಯ ಕಿಶನ್, ಗುಂಪು 3ರಲ್ಲಿ ರೀಮಾ ಎ.ಎಸ್, ಗುಂಪು 4ರಲ್ಲಿ ಅಲಿತಾ ಡಿಸೋಜ ಮತ್ತು 5ರಲ್ಲಿ ಸಾರಾ ಎಲಿಶಾ ಪಿಂಟೊ ಚಾಂಪಿಯನ್ ಆದರು.
ಪುರುಷರ ಮುಕ್ತ ವಿಭಾಗ:
100 ಮೀಟರ್ಸ್ ಫ್ರೀಸ್ಟೈಲ್: ವಾಫಿ ಅಬ್ದುಲ್ ಹಕೀಂ (ಮಂಗಳಾ ಈಜು ಕ್ಲಬ್, ಮಂಗಳೂರು)–1. ಕಾಲ: 57:87ಸೆ, ಸಂಚಿತ್ ಪೂಜಾರಿ (ಜೈ ಹಿಂದ್ ಈಜು ಕೇಂದ್ರ)–2, ಶ್ರೀರಂಗ ಉಮೇಶ್ (ಆಳ್ವಾಸ್ ಕ್ರೀಡಾ ಸಂಕೀರ್ಣ)–3; 50 ಮೀ ಫ್ರೀಸ್ಟೈಲ್: ಸಂಚಿತ್ ಪೂಜಾರಿ (ಜೈಹಿಂದ್)–1.ಕಾಲ: 26:84 ಸೆ, ಶ್ರೀರಂಗ ಉಮೇಶ್ (ಆಳ್ವಾಸ್ ಕ್ರೀಡಾ ಸಂಕೀರ್ಣ)–2, ನಿಶಾಂತ್ ಗೌಡ (ಮರ್ಲಿನ್ ಈಜು ಕೇಂದ್ರ, ಮೈಸೂರು)–3; 200 ಮೀ ಫ್ರೀಸ್ಟೈಲ್: ವಾಫಿ ಅಬ್ದುಲ್ ಹಕೀಂ (ಮಂಗಳಾ, ಮಂಗಳೂರು)–1. ಕಾಲ: 2ನಿ 14:13ಸೆ, ತನಿಷ್ (ಮಂಗಳಾ)–2, ಜೀವನ್ ಗೌಡ (ಆಳ್ವಾಸ್ ಕ್ರೀಡಾ ಸಂಕೀರ್ಣ)–3; 400 ಮೀ ಫ್ರೀಸ್ಟೈಲ್: ವಾಫಿ ಅಬ್ದುಲ್ ಹಕೀಂ (ಮಂಗಳಾ ಮಂಗಳೂರು)–1. ಕಾಲ: 4 ನಿಮಿಷ 45:50 ಸೆಕೆಂಡು, ಸಂಚಿತ್ ಪೂಜಾರಿ (ಜೈಹಿಂದ್ ಮಂಗಳೂರು)–2, ತನಿಷ್ (ಮಂಗಳಾ)–3; 100 ಮೀ ಬಟರ್‌ಫ್ಲೈ: ತನಿಶ್ (ಮಂಗಳಾ)–1. ಕಾಲ: 1ನಿ 7:60ಸೆ, ಶ್ರೀರಂಗ ಉಮೇಶ್ (ಆಳ್ವಾಸ್ ಕ್ರೀಡಾ ಸಂಕೀರ್ಣ)–2, ನಿಶಾಂತ್ ಗೌಡ (ಮರ್ಲಿನ್ ಈಜು ಕೇಂದ್ರ, ಮೈಸೂರು)–3.
ಮಹಿಳೆಯರು:
50 ಮೀ ಫ್ರೀಸ್ಟೈಲ್: ದೇಶ್ನಾ ಶೆಟ್ಟಿ (ಹಾಸನಾಂಬ ಈಜುಕೇಂದ್ರ, ಹಾಸನ)–1. ಕಾಲ: 30:90ಸೆ, ವೈಷ್ಣವಿ ಕುಡ್ವ (ಮಂಗಳಾ ಈಜುಕೇಂದ್ರ)–2, ಮೋನಿಶಾ (ಸೆಂಟ್ರಲ್ ಕಾಲೇಜು, ಹಾಸನ)–3; 100 ಮೀಟರ್ಸ್ ಫ್ರೀಸ್ಟೈಲ್: ದೇಶ್ನಾ ಪಿ.ಶೆಟ್ಟಿ (ಹಾಸನಾಂಬ ಈಜು ಕೇಂದ್ರ, ಹಾಸನ)–1. ಕಾಲ: 1ನಿ 07:25ಸೆ, ಅನಿಕಾ (ಪುತ್ತೂರು ಈಜು ಕೇಂದ್ರ)–2, ಮೋನಿಶಾ (ಸೆಂಟ್ರಲ್ ಕಾಲೇಜು, ಹಾಸನ)–3; 200 ಮೀ ಫ್ರೀಸ್ಟೈಲ್: ವೈಷ್ಣವಿ ಕುಡ್ವ (ಮಂಗಳಾ)–1. ಕಾಲ: 2ನಿ 17:49ಸೆ, ದೇಶ್ನಾ ಪಿ.ಶೆಟ್ಟಿ (ಹಾಸನಾಂಬ, ಹಾಸನ)–2, ನಿಶಿ ಕಾರ್ವೆ (ಆಳ್ವಾಸ್ ಮೂಡುಬಿದಿರೆ)–3; 400 ಮೀ ಫ್ರೀಸ್ಟೈಲ್: ವೈಷ್ಣವಿ ಕುಡ್ವ (ಮಂಗಳಾ)–1. ಕಾಲ: 4ನಿ 52:02ಸೆ, ಅನಿಕಾ (ಪುತ್ತೂರು ಈಜು ಕ್ಲಬ್)–2; 100 ಮೀ ಬಟರ್‌ಫ್ಲೈ: ಮೋನಿಶಾ (ಸೆಂಟ್ರಲ್ ಕಾಲೇಜು, ಹಾಸನ)–1. ಕಾಲ: 1ನಿ 19:43ಸೆ, ಅನಿಕಾ (ಪುತ್ತೂರು ಈಜುಕೇಂದ್ರ)–2, ನಿಶಿ ಕಾರ್ವೆ (ಆಳ್ವಾಸ್ ಮೂಡುಬಿದಿರೆ)–3.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.