
ಪ್ರಜಾವಾಣಿ ವಾರ್ತೆ
ಮಂಗಳೂರು: ಬೆಂಗಳೂರಿನ ಮನುದೇವ್ ಅವರು ಕಾಸ್ಮೊಪಾಲಿಟನ್ ಕ್ಲಬ್ ಆಶ್ರಯದಲ್ಲಿ ಇಲ್ಲಿ ಗುರುವಾರ ಆರಂಭಗೊಂಡ ರಾಜ್ಯಮಟ್ಟದ ಆಹ್ವಾನಿತ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ಜಯ ಸಾಧಿಸಿದರು.
ಕಾಸ್ಮೊಪಾಲಿಟನ್ ಕ್ಲಬ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್ ಷಿಪ್‌ನಲ್ಲಿ ಅವರು ಯೋಗೀಶ್ ಕುಮಾರ್ ವಿರುದ್ಧ 150-43ರಲ್ಲಿ ಜಯ ಗಳಿಸಿದರು. ಮೇಹುಲ್ ವಿರುದ್ಧ ಆರ್. ಸಂತೋಷ್ 150–118ರಲ್ಲಿ ಗೆಲುವು ದಾಖಲಿಸಿದರು. ಬೆಂಗಳೂರಿನ 13 ವರ್ಷದ ಆಟಗಾರ ಮಹಮ್ಮದ್ ಮುಸ್ತಫ ವಿರುದ್ಧ ಎಂ.ಯೋಗೇಶ್ ಕುಮಾರ್ 150–78ರಲ್ಲಿ ಜಯ ಸಾಧಿಸಿದರು.
ಆರ್.ಸಂತೋಷ್ 200–150ರಲ್ಲಿ ಕ್ಷಿತಿಜ್ ಗರ್ಗ್ ಅವರನ್ನು ಮಣಿಸಿದರು. ಸ್ನೂಕರ್‌ನಲ್ಲಿ ಆರ್.ಸಂತೋಷ್ 2–0ಯಿಂದ (75-32, 63-08) ಆಹಿಲ್ ವಿರುದ್ಧ ಜಯ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.