ADVERTISEMENT

ರಾಜ್ಯ ಡೈವಿಂಗ್: ವರುಣ್, ಶಖೈನಾಗೆ ಚಿನ್ನ ಡಬಲ್

​ಪ್ರಜಾವಾಣಿ ವಾರ್ತೆ
Published 31 ಮೇ 2023, 23:27 IST
Last Updated 31 ಮೇ 2023, 23:27 IST
ಬೆಂಗಳೂರಿನ ಕೆನ್ಸಿಂಗ್ಟನ್ ಈಜುಕೊಳದಲ್ಲಿ ಬುಧವಾರ ನಡೆದ ಎನ್.ಜೆ.ಆರ್. ರಾಜ್ಯ ಅಕ್ವೆಟಿಕ್ ಚಾಂಪಿಯನ್‌ಷಿಪ್‌ನ ಮಹಿಳೆಯರ ವಿಭಾಗದ ಡೈವಿಂಗ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದ ಶಕೈನಾ ಜೆ. ರಾವ್   ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಬೆಂಗಳೂರಿನ ಕೆನ್ಸಿಂಗ್ಟನ್ ಈಜುಕೊಳದಲ್ಲಿ ಬುಧವಾರ ನಡೆದ ಎನ್.ಜೆ.ಆರ್. ರಾಜ್ಯ ಅಕ್ವೆಟಿಕ್ ಚಾಂಪಿಯನ್‌ಷಿಪ್‌ನ ಮಹಿಳೆಯರ ವಿಭಾಗದ ಡೈವಿಂಗ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದ ಶಕೈನಾ ಜೆ. ರಾವ್   ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.    

ಬೆಂಗಳೂರು: ಡಾಲ್ಫಿನ್ ಅಕ್ವೆಟಿಕ್ಸ್‌ ಕೇಂದ್ರದ ವರುಣ್ ಸತೀಶ್ ಪೈ ಹಾಘೂ ಶಕೈನಾ ಜೆ ರಾವ್ ಅವರು ಎನ್‌.ಜೆ.ಆರ್. ರಾಜ್ಯ ಸೀನಿಯರ್ ಅಕ್ವೆಟಿಕ್ಸ್ ಚಾಂಪಿಯನ್‌ಷಿಪ್‌ನ ಡೈವಿಂಗ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಚಿನ್ನ ಡಬಲ್ ಸಾಧನೆ ಮಾಡಿದರು.

ಪುರುಷರ ಹಾಗೂ ಮಹಿಳೆಯರ 1 ಮೀಟರ್ ಸ್ಪ್ರಿಂಗ್‌ಬೋರ್ಡ್ ಹಾಗೂ 3 ಮೀಟರ್ ಸ್ಪ್ರಿಂಗ್‌ಬೋರ್ಡ್‌ ವಿಭಾಗಗಳಲ್ಲಿ ಅವರು ಪ್ರಥಮ ಸ್ಥಾನ ಗಳಿಸಿದರು.

ಫಲಿತಾಂಶಗಳು:

ADVERTISEMENT

ಪುರುಷರು: 1ಮೀ.ಸ್ಪ್ರಿಂಗ್‌ಬೋರ್ಡ್: ವರುಣ್ ಸತೀಶ್ ಪೈ (ಡಾಲ್ಫಿನ್ ಅಕ್ವೆಟಿಕ್ಸ್; 230.30 ಪಾಯಿಂಟ್ಸ್)–1,  ಅಷಿತೋಷ್ ಬಿಲ್‌ಗೋಜಿ (ಎಬಿಬಿಎ ಸ್ಪೋರ್ಟ್ಸ್‌ ಕ್ಲಬ್)–2, ಆರ್ಯನ್ ಮೊಸೆಸ್ ವ್ಯಾಸ್ (ಡಾಲ್ಫಿನ್ ಅಕ್ವೆಟಿಕ್ಸ್)–3

3 ಮೀ ಸ್ಪ್ರಿಂಗ್‌ಬೋರ್ಡ್: ವರುಣ್ ಸತೀಶ್ ಪೈ (ಪಾಯಿಂಟ್ಸ್: 222.25)–1, ಆರ್ಯನ್ ಮೊಸೆಸ್ ವ್ಯಾಸ್ –2, ಎಸ್‌ ಸೋಹನ್ ಸೂರಿ –3 (ಮೂವರೂ ಡಾಲ್ಫೀನ್ ಅಕ್ವೆಟಿಕ್ಸ್‌ನವರು).

ಮಹಿಳೆಯರು:  1 ಮೀ ಸ್ಪ್ರಿಂಗ್‌ಬೋರ್ಡ್: ಶಖೈನಾ ಜೆ ರಾವ್ (145.20ಪಾಯಿಂಟ್ಸ್)–1, ಚೈತ್ರಾ ಪ್ರಸಾದ್ –2, ಪಿ. ನಯನಾ –3 (ಎಲ್ಲರೂ ಡಾಲ್ಫಿನ್ ಅಕ್ವೆಟಿಕ್ಸ್). 3 ಮೀ ಸ್ಪ್ರಿಂಗ್‌ಬೋರ್ಡ್: ಶಖೈನಾ ಜೆ. ರಾವ್ (152)–1, ಚೈತ್ರಾ ಎಸ್ ಪ್ರಸಾದ್ –2, ಪೂರ್ವಿಕಾ ವೆಂಕಟೇಶ್ –3 (ಎಲ್ಲರೂ ಡಾಲ್ಫೀನ್‌ ಅಕ್ವೆಟಿಕ್ಸ್‌ನವರು).

ಬೆಂಗಳೂರಿನ ಕೆನ್ಸಿಂಗ್ಟನ್ ಈಜುಕೊಳದಲ್ಲಿ ಬುಧವಾರ ಎನ್.ಜೆ.ಆರ್. ರಾಜ್ಯ ಅಕ್ವೆಟಿಕ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದ ಡೈವಿಂಗ್ ನಲ್ಲಿ ವರುಣ್ ಸತೀಶ್ ಪೈ  ಪ್ರಥಮ ಸ್ಥಾನಗಳಿಸಿದರು  ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.