ADVERTISEMENT

ಪಂಜಾಬ್ ಪೊಲೀಸ್‌ಗೆ ಭರ್ಜರಿ ಜಯ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 19:00 IST
Last Updated 3 ಡಿಸೆಂಬರ್ 2021, 19:00 IST
ಪಂದ್ಯವೊಂದರ ರೋಚಕ ಘಟ್ಟ
ಪಂದ್ಯವೊಂದರ ರೋಚಕ ಘಟ್ಟ   

ಬೆಂಗಳೂರು: ಭಾರತ ತಂಡದ ಸ್ಟ್ರೈಕರ್ ರಮಣ್‌ದೀಪ್ ಸಿಂಗ್ ನಾಯಕತ್ವದ ಪಂಜಾಬ್ ಪೊಲೀಸ್ ತಂಡ ನಗರದಲ್ಲಿ ನಡೆಯುತ್ತಿರುವ ‍ಅಖಿಲ ಭಾರತ ಪೊಲೀಸ್ ಹಾಕಿ ಟೂರ್ನಿಯಲ್ಲಿ ಶುಕ್ರವಾರ ಭರ್ಜರಿ ಜಯ ಗಳಿಸಿತು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಕಿ ಕ್ರೀಡಾಂಗಣದಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಪಂಜಾಬ್ ಪೊಲೀಸ್ ತಂಡ ಉತ್ತರಾಖಂಡ ಪೊಲೀಸ್‌ ತಂಡವನ್ನು ‌17–0ರಲ್ಲಿ ಮಣಿಸಿತು. ರಮಣ್‌ದೀಪ್ ಸಿಂಗ್ ಐದು (5, 7, 37, 52 ಮತ್ತು 55ನೇ ನಿಮಿಷ) ಗೋಲು ಗಳಿಸಿದರು. ಹರದೀಪ್ ಸಿಂಗ್ ಕೂಡ ಐದು (9, 21, 26, 48, 60) ಗೋಲು ಗಳಿಸಿದರು. ವರಿಂದರ್ ಸಿಂಗ್ (20, 24, 45ನೇ ನಿ) ಕರಣ್‌ಬೀರ್ ಸಿಂಗ್ (11ನೇ ನಿ), ಸಿಮ್ರಾನ್ ಜೀತ್ ಸಿಂಗ್ (12ನೇ ನಿ), ಕನ್ವರ್‌ಜೀತ್ ಸಿಂಗ್ (22ನೇ ನಿ), ಬಲ್ವಿಂದರ್ ಸಿಂಗ್‌ (51ನೇ ನಿ) ಕೂಡ ಮಿಂಚಿದರು.

ಚಂಡೀಗಢ ಪೊಲೀಸ್ ತಂಡ ಮಧ್ಯಪ್ರದೇಶ ಪೊಲೀಸ್ ವಿರುದ್ಧ 4–2ರಲ್ಲಿ, ರಾಜಸ್ಥಾನ ಪೊಲೀಸ್ ಕೇರಳ ಪೊಲೀಸ್ ವಿರುದ್ಧ 12–1ರಲ್ಲಿ, ‘ಸಶಸ್ತ್ರ ಸೀಮಾ ಬಲ್‌’ ಗುಜರಾತ್ ಪೊಲೀಸ್ ವಿರುದ್ಧ 9–0ಯಿಂದ ಜಯ ಗಳಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.