ADVERTISEMENT

ಬ್ಲಿಟ್ಜ್‌ ಚೆಸ್ ಟೂರ್ನಿ: ಸುಜಯ್‌ಗೆ ಚಾಂಪಿಯನ್‌ ಪಟ್ಟ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 11:40 IST
Last Updated 29 ನವೆಂಬರ್ 2021, 11:40 IST
ಚೆಸ್‌
ಚೆಸ್‌   

ಬೆಂಗಳೂರು: ಪೂರ್ಣ ಅಂಕಗಳನ್ನು ಗಳಿಸಿದ ಬೆಂಗಳೂರಿನ ಸುಜಯ್ ಬಿ.ಎಂ ಅವರು ಚಾಂಪಿಯನ್ಸ್ ಚೆಸ್ ಅಕಾಡೆಮಿ ಆಯೋಜಿಸಿದ್ದ ಬ್ಲಿಟ್ಜ್‌ ಚೆಸ್ ಟೂರ್ನಿಯ ಮುಕ್ತ ವಿಭಾಗದ ಚಾಂಪಿಯನ್ ಆದರು.

ಐದರಲ್ಲಿ ಐದು ಪಾಯಿಂಟ್‌ಗಳನ್ನು ಅವರು ಗಳಿಸಿದರು.ನಾಲ್ಕು ಪಾಯಿಂಟ್ ಕಲೆ ಹಾಕಿದ ಸಂತೋಷ್ ಕುಮಾರ್ ಬಿ.ಎಸ್‌ ಎರಡನೇ ಸ್ಥಾನ ಗಳಿಸಿದರೆ ಅನುದೀಪ್ ಕೆ.ಎಸ್‌ ಕೂಡ ನಾಲ್ಕು ಪಾಯಿಂಟ್ ಗಳಿಸಿ ಮೂರನೇ ಸ್ಥಾನ ಗಳಿಸಿದರು.

ಫಲಿತಾಂಶಗಳು: ಮುಕ್ತ ವಿಭಾಗ: ಸುಜಯ್‌ ಬಿ.ಎಂ–1, ಸಂತೋಷ್ ಕುಮಾರ್–2, ಅನುದೀಪ್–3; 16 ವರ್ಷದೊಳಗಿನವರು: ಚಿನ್ಮಯಿ–1, ಶಾನ್ ಪಿಂಟೊ–2, ಸಮರ್ಥ್‌ ದೇಸಾಯಿ–3; 10 ವರ್ಷದೊಳಗಿನವರ ವಿಭಾಗ: ಫಯಾಜ್ ಅಹಮ್ಮದ್–1, ಹಾರುಷ್‌–2, ಸುಜನ್ ಶೇಷಾದ್ರಿ–3.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.