ADVERTISEMENT

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಸೆಮಿಗೆ ಭಾರತದ ಸುಜೀತ್‌

ಪಿಟಿಐ
Published 26 ಅಕ್ಟೋಬರ್ 2025, 15:39 IST
Last Updated 26 ಅಕ್ಟೋಬರ್ 2025, 15:39 IST
ಸುಜೀತ್‌ ಕಲ್ಕಲ್‌
ಸುಜೀತ್‌ ಕಲ್ಕಲ್‌   

ನೋವಿಸಾದ್ (ಸರ್ಬಿಯಾ): ಭಾರತದ ಸುಜೀತ್‌ ಕಲ್ಕಲ್‌ ಅವರು 23 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಸೆಮಿಫೈನಲ್‌ ಪ್ರವೇಶಿಸಿದರು.

ಪುರುಷರ 65 ಕೆ.ಜಿ. ಸ್ಪರ್ಧೆಯಲ್ಲಿ ಛಾಪು ಮೂಡಿಸಿರುವ ಸುಜೀತ್‌ ಅವರು ಎಂಟರ ಘಟ್ಟದ ಪಂದ್ಯದಲ್ಲಿ 4–2ರಿಂದ ಬಷೀರ್‌ ಮಗೊಮೆಡೊವ್‌ ಅವರನ್ನು ಮಣಿಸಿದರು. ತೀವ್ರ ಪೈಪೋಟಿ ಇದ್ದ ಪಂದ್ಯದಲ್ಲಿ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು ಎದುರಾಳಿಯ ವಿರುದ್ಧ ಮೇಲುಗೈ ಸಾಧಿಸಿದರು.

ಇದಕ್ಕೂ ಮುನ್ನ ಸುಜೀತ್‌ ಅವರು ಮೊದಲ ಸುತ್ತಿನಲ್ಲಿ 12–2ರಿಂದ ಮಾಲ್ಡೋವಾದ ಫಿಯೊಡರ್‌ ಸೀವ್‌ದರಿ ವಿರುದ್ಧ ಹಾಗೂ ಎರಡನೇ ಸುತ್ತಿನಲ್ಲಿ 11–0ಯಿಂದ ಪೋಲೆಂಡ್‌ನ ಡಾಮಿನಿಕ್‌ ಜೇಕಬ್‌ ವಿರುದ್ಧ ಗೆಲುವು ಸಾಧಿಸಿದ್ದರು.

ADVERTISEMENT

ನಾಲ್ಕರ ಘಟ್ಟದಲ್ಲಿ ಅವರು ಜಪಾನ್‌ನ ಯೂಟೊ ನಿಶಿಯುಶಿ ವಿರುದ್ಧ ಸೆಣಸಲಿದ್ದಾರೆ.

ಆದರೆ, ಶುಭಂ (61 ಕೆ.ಜಿ.) ಹಾಗೂ ವಿಕ್ಕಿ (97 ಕೆ.ಜಿ.) ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಸೋಲುವುದರೊಂದಿಗೆ ಅಭಿಯಾನ ಮುಗಿಸಿದರು. 86 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಆಶಿಶ್‌ ಅವರೂ ಕ್ವಾಲಿಫಿಕೇಷನ್‌ ಸುತ್ತಿನಲ್ಲಿ ಪರಾಭವಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.