ADVERTISEMENT

ದಿನದಿಂದ ದಿನಕ್ಕೆ ಆರಾಮ ಎನಿಸುತ್ತಿದೆ: ಸುಮಿತ್ ನಾಗಲ್

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 22:26 IST
Last Updated 5 ಫೆಬ್ರುವರಿ 2026, 22:26 IST
<div class="paragraphs"><p>ಸುಮಿತ್ ನಾಗಲ್</p></div>

ಸುಮಿತ್ ನಾಗಲ್

   

ಪಿಟಿಐ ಚಿತ್ರ

ಬೆಂಗಳೂರು: ಕೆಳ ಬೆನ್ನಿನ ನೋವಿನಿಂದ ಚೇತರಿಕೆಯಲ್ಲಿರುವ ಭಾರತದ ಅಗ್ರ ಸಿಂಗಲ್ಸ್ ಆಟಗಾರ ಸುಮಿತ್ ನಾಗಲ್ ಅವರು ‘ದಿನದಿಂದ ದಿನಕ್ಕೆ ಆರಾಮ ಎನಿಸುತ್ತಿದೆ’ ಎಂದು ಹೇಳಿದ್ದಾರೆ. ಶನಿವಾರ ಆರಂಭವಾಗುವ ಭಾರತ ಮತ್ತು ನೆದರ್ಲೆಂಡ್ಸ್‌ ನಡುವಣ ಡೇವಿಸ್‌ ಕಪ್‌ ಪಂದ್ಯಕ್ಕೆ ನಾಗಲ್ ಸಜ್ಜಾಗುತ್ತಿದ್ದಾರೆ.

ADVERTISEMENT

ಹರಿಯಾಣದ ಆಟಗಾರ, 2025ರಲ್ಲಿ ಲಯ ಕಳೆದುಕೊಂಡು ಸಾಕಷ್ಟು ಒತ್ತಡ ಅನುಭವಿಸಿದ್ದರು. ಗಾಯದ ಸಮಸ್ಯೆಯನ್ನೂ ಎದುರಿಸಿದ್ದರು. ಪರಿಣಾಮ ವಿಶ್ವ ಕ್ರಮಾಂಕದಲ್ಲಿ 281ನೇ ಸ್ಥಾನಕ್ಕೆ ಕುಸಿದಿದ್ದರು.

ಮೂರು ವಾರಗಳ ಪುನಶ್ಚೇತನ ಅವಧಿಯು ಈ ಪಂದ್ಯಕ್ಕಿಳಿಯಲು ತಮಗೆ ಸಾಕಷ್ಟು ವಿಶ್ವಾಸ ಮೂಡಿಸಿದೆ ಎಂದು ಗುರುವಾರ ಅಭ್ಯಾಸ ನಡೆಸಿದ ನಂತರ ನಾಗಲ್ ತಿಳಿಸಿದರು.

‘ಬ್ಯಾಂಕಾಕ್‌ ಟೂರ್ನಿಯಲ್ಲಿ ನೋವು ಕಾಣಿಸಿಕೊಂಡ ದಿನ ರಾತ್ರಿಯೇ ನಾನು ದೇಶಕ್ಕೆ ಮರಳಿದ್ದೆ. ತಕ್ಷಣ ಆರೈಕೆಯಲ್ಲಿ ತೊಡಗಿಕೊಂಡೆ. ಡೇವಿಸ್‌ ಕಪ್‌ಗೆ ಸಜ್ಜಾಗಲು ಏನೆಲ್ಲಾ ಮಾಡಬಹುದೊ ಅದನ್ನೆಲ್ಲಾ ಮಾಡಿದ್ದೇನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.