ADVERTISEMENT

ಸರ್ಫಿಂಗ್‌: ರಮೇಶ್‌ ಮಡಿಲಿಗೆ ಚಾಂಪಿಯನ್‌ ಪಟ್ಟ

ಗೋವಾದ ಶುಗರ್ ಬನಾರ್ಸೆಗೆ ಒಲಿದ ಅದೃಷ್ಟ

​ಪ್ರಜಾವಾಣಿ ವಾರ್ತೆ
Published 29 ಮೇ 2022, 15:44 IST
Last Updated 29 ಮೇ 2022, 15:44 IST
ಮಂಗಳೂರಿನ ಪಣಂಬೂರಿನಲ್ಲಿ ಭಾನುವಾರ ನಡೆದ ಇಂಡಿಯನ್‌ ಓಪನ್‌ ಸರ್ಫಿಂಗ್‌ ಸ್ಪರ್ಧೆಯಲ್ಲಿ ರಮೇಶ್‌ ಬೂದುಹಾಳ್‌ ಅಲೆಗಳನ್ನು ಎದುರಿಸಿದ ದೃಶ್ಯ
ಮಂಗಳೂರಿನ ಪಣಂಬೂರಿನಲ್ಲಿ ಭಾನುವಾರ ನಡೆದ ಇಂಡಿಯನ್‌ ಓಪನ್‌ ಸರ್ಫಿಂಗ್‌ ಸ್ಪರ್ಧೆಯಲ್ಲಿ ರಮೇಶ್‌ ಬೂದುಹಾಳ್‌ ಅಲೆಗಳನ್ನು ಎದುರಿಸಿದ ದೃಶ್ಯ   

ಮಂಗಳೂರು: ಆತಿಥೇಯ ಕರ್ನಾಟಕದ ರಮೇಶ್ ಬೂದಿಹಾಳ ಭಾನುವಾರ ಇಲ್ಲಿ ನಡೆದ ಇಂಡಿಯನ್ ಓಪನ್ ಸರ್ಫಿಂಗ್ ಚಾಂಪಿಯನ್‌ಷಿಪ್‌ನ ಮೂರನೇ ಆವೃತ್ತಿಯ ಕೊನೆಯ ದಿನದ ಫೈನಲ್‌ನಲ್ಲಿ ಪುರುಷರ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು.

ಸರ್ಫಿಂಗ್‌ ಆರಂಭದ ದಿನದಿಂದಲೂ ರಮೇಶ್‌ ಬೂದಿಹಾಳ್‌ ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿಗೆ ಭಾಜನರಾದರು.

ತಮಿಳುನಾಡಿನ ಅಜೀಶ್ ಅಲಿ ದ್ವಿತೀಯ ಹಾಗೂ ಸತೀಶ್ ಸರವಣನ್‌ ತೃತೀಯ ಸ್ಥಾನ ಪಡೆದರು.

ಬಾಲಕಿಯರ ವಿಭಾಗದಲ್ಲಿ ಗೋವಾದ ಶುಗರ್ ಬನಾರ್ಸೆ ಮತ್ತು ಸೋಫಿಯಾ ಶರ್ಮಾ ಚಾಂಪಿಯನ್‌ ಆದರು.

ಮಹಿಳೆಯರ ಮುಕ್ತ ವಿಭಾಗದಲ್ಲಿ ಗೋವಾದ ಶುಗರ್ ಬನಾರ್ಸೆ ಮೊದಲ ಸ್ಥಾನ, ಕರ್ನಾಟಕದ ಸೃಷ್ಟಿ ಸೆಲ್ವಂ, ಸಿಂಚನಾ ಗೌಡ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು.

16 ವರ್ಷದ ಬಾಲಕರ ವಿಭಾಗದಲ್ಲಿ ಚೆನ್ನೈನ ಕಿಶೋರ್ ಕುಮಾರ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ತಮಿಳುನಾಡಿನ ನವೀನ್‌ ಕುಮಾರ್ ಆರ್. ಮತ್ತು ಜೀವನ್ ಎಸ್. ಎರಡನೇ ಹಾಗೂ ಮೂರನೇ ಸ್ಥಾನ ಪಡೆದರು.

ಬಾಲಕಿಯರ ವಿಭಾಗದಲ್ಲಿ ಗೋವಾದ ಸೋಫಿಯಾ ಶರ್ಮಾ 18.50 ಪಾಯಿಂಟ್‌ ದಾಖಲಿಸಿ ಚಾಂಪಿಯನ್‌ ಷಿಪ್‌ನ ಅತ್ಯಧಿಕ ಪಾಯಿಂಟ್‌ ದಾಖಲಿಸಿದ ಆಟಗಾರ್ತಿ ಆಗಿ ಮೊದಲ ಸ್ಥಾನ ಪಡೆದರು. ಮಂಗಳೂರಿನ 9 ವರ್ಷದ ತನಿಷ್ಕಾ ಮೆಂಡನ್ ಹಾಗೂ ಸಾನ್ವಿ ಹೆಗ್ಡೆ ಕ್ರಮವಾಗಿ (12.23, 11.33) ಪಾಯಿಂಟ್‌ ದಾಖಲಿಸಿದ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.