ADVERTISEMENT

ರಾಷ್ಟ್ರೀಯ ಸೀನಿಯರ್ ಈಜು: ಧಿನಿಧಿ, ಗಂಗೂಲಿ ರಾಷ್ಟ್ರೀಯ ದಾಖಲೆ

ಮುಂದುವರಿದ ಕರ್ನಾಟಕದ ಪಾರಮ್ಯ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 16:26 IST
Last Updated 23 ಜೂನ್ 2025, 16:26 IST
ಶೋನ್‌ ಗಂಗೂಲಿ
ಶೋನ್‌ ಗಂಗೂಲಿ   

ಬೆಂಗಳೂರು: ಕರ್ನಾಟದ ಈಜುಪಟುಗಳಾದ ಧಿನಿಧಿ ದೇಸಿಂಗು ಮತ್ತು ಶೋನ್‌ ಗಂಗೂಲಿ ಅವರು ಭುವನೇಶ್ವರದಲ್ಲಿ ನಡೆಯುತ್ತಿರುವ 78ನೇ ರಾಷ್ಟ್ರೀಯ ಸೀನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. 

ಮಹಿಳೆಯರ 200 ಮೀಟರ್‌ ಫ್ರೀಸ್ಟೈಲ್‌ನಲ್ಲಿ ಒಲಿಂಪಿಯನ್‌ ಧಿನಿಧಿ 2ನಿಮಿಷ 02.97 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. ಇದರೊಂದಿಗೆ 2023ರಲ್ಲಿ ಹೈದರಾಬಾದ್‌ನ ಕೂಟದಲ್ಲಿ ನಿರ್ಮಿಸಿದ್ದ ದಾಖಲೆಯನ್ನು (2ನಿ.04.24ಸೆ) ಸುಧಾರಿಸಿಕೊಂಡರು.

ಪುರುಷರ 200 ಮೀಟರ್‌ ಮೆಡ್ಲೆ ಸ್ಪರ್ಧೆಯಲ್ಲಿ ಶೋನ್‌ 2 ನಿಮಿಷ 04.34 ಸೆಕೆಂಡ್‌ಗಳಲ್ಲಿ ದಡ ಸೇರಿದರು. ಈ ಮೂಲಕ 2022ರಲ್ಲಿ ಗುವಾಹಟಿಯ ಕೂಟದಲ್ಲಿ ಶಿವ ಎಸ್‌. (2ನಿ.05.64ಸೆ) ನಿರ್ಮಿಸಿದ್ದ ದಾಖಲೆಯನ್ನು ಮುಳುಗಿಸಿದರು. 

ADVERTISEMENT

4x100 ಮೀಟರ್‌ ಫ್ರೀಸ್ಟೈಲ್‌ ಮಿಶ್ರ ರಿಲೆ ಸ್ಪರ್ಧೆಯಲ್ಲೂ ಕರ್ನಾಟಕ ರಾಷ್ಟ್ರೀಯ ದಾಖಲೆ ಬರೆಯಿತು. ರುತುಜಾ ಎಸ್‌., ಲತಿಷಾ ಮಂದಾನ, ಆಕಾಶ್‌ ಮಣಿ ಮತ್ತು ತನಿಶ್‌ ಜಾರ್ಜ್‌ ಮ್ಯಾಥ್ಯೂ ಅವರನ್ನು ಒಳಗೊಂಡ ತಂಡವು 3 ನಿಮಿಷ 41.18 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿತು. 2023ರಲ್ಲಿ ಕರ್ನಾಟಕ ತಂಡವೇ ನಿರ್ಮಿಸಿದ್ದ ದಾಖಲೆಯನ್ನು ಸುಧಾರಿಸಿಕೊಂಡಿತು. 

ಕೂಟದ ಎರಡನೇ ದಿನವಾದ ಸೋಮವಾರ ಕರ್ನಾಟಕ ಮೂರು ಚಿನ್ನ, ಒಂದು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳೊಂದಿಗೆ ಪಾರಮ್ಯ ಮುಂದುವರಿಸಿತು. ಮೊದಲ ದಿನವಾದ ಭಾನುವಾರ ಮೂರು ಚಿನ್ನ ಸೇರಿದಂತೆ ಒಟ್ಟು ಏಳು ಪದಕಗಳನ್ನು ಗೆದ್ದುಕೊಂಡಿತ್ತು.

ಪುರುಷರು

50 ಮೀ. ಫ್ರೀಸ್ಟೈಲ್‌: ಜಶುವಾ ಥಾಮಸ್‌ (ತಮಿಳುನಾಡು)–1, ಹೀರ್‌ ಗೀತೇಶ್‌ ಷಾ (ಮಹಾರಾಷ್ಟ್ರ)–2, ಆಕಾಶ್‌ ಮಣಿ (ಕರ್ನಾಟಕ)–3, ಕಾಲ: 23.06 ಸೆ.

1,500 ಮೀ. ಫ್ರೀಸ್ಟೈಲ್‌: ಕುಶಾಗ್ರ ರಾವತ್ (ದೆಹಲಿ)–1, ಆರ್ಯನ್ ನೆಹ್ರಾ (ಗುಜರಾತ್‌)–2, ಅದ್ವೈತ್‌ ‍ಪಾಗೆ (ಮಧ್ಯಪ್ರದೇಶ)–3, ಕಾಲ: 15ನಿ.32.95 ಸೆ.

200 ಮೀ. ಮೆಡ್ಲೆ: ಶೋನ್‌ ಗಂಗೂಲಿ (ಕರ್ನಾಟಕ)–1, ವಿನಾಯಕ್‌ ವಿಜಯಶಂಕರ್‌ (ಸರ್ವಿಸಸ್‌)–2, ಶಿವ ಶ್ರೀಧರ್‌ (ಕರ್ನಾಟಕ)–3, ಕಾಲ: 2ನಿ.04.34 ಸೆ., ನೂತನ ದಾಖಲೆ, ಹಳೆಯದು: ಶಿವ ಎಸ್‌. ಕಾಲ: 2ನಿ.05.64 ಸೆ.

50 ಮೀ. ಬ್ರೆಸ್ಟ್‌ ಸ್ಟ್ರೋಕ್‌: ಎಂ.ಎಸ್‌.ಯದೇಶ್‌ ಬಾಬು (ತಮಿಳುನಾಡು)–1, ವಿದಿತ್ಎಸ್‌.ಶಂಕರ್ (ಕರ್ನಾಟಕ)–2, ಧನುಷ್‌ ಸುರೇಶ್ (ತಮಿಳುನಾಡು)–3, ಕಾಲ: 28.35 ಸೆ.

ಮಹಿಳೆಯರು

200 ಮೀ. ಫ್ರೀಸ್ಟೈಲ್‌: ಧಿನಿಧಿ ದೇಸಿಂಗು (ಕರ್ಣಾಟಕ)–1, ಭವ್ಯಾ ಸಚದೇವ (ದೆಹಲಿ)–2, ಅದಿತಿ ಸತೀಶರ್ ಹೆಗ್ಡೆ (ಮಹಾರಾಷ್ಟ್ರ)–3, ಕಾಲ: 2ನಿ.02.97 ಸೆ.

200 ಮೀ. ಮೆಡ್ಲೆ: ಸಾನ್ವಿ ದೇಶ್ವಾಲ್ (ಮಹಾರಾಷ್ಟ್ರ)–1, ಶ್ರೀನಿಧಿ ನಟೇಶನ್ (ತಮಿಳುನಾಡು)–2, ತಾನ್ಯಾ ಷಡಕ್ಷರಿ (ಕರ್ನಾಟಕ)–3, ಕಾಲ: 2ನಿ.21.87 ಸೆ.

50 ಮೀ. ಬ್ರೆಸ್ಟ್‌ಸ್ಟ್ರೋಕ್‌: ಮಿತ್ತಪಳ್ಳಿ ರಿತ್ವಿಕಾ (ತೆಲಂಗಾಣ)–1, ಹರ್ಷಿತಾ ಜಯರಾಮ್ (ರೈಲ್ವೇಸ್‌)–2, ಅವನಿ ಛಾಬ್ರಾ (ಪಂಜಾಬ್‌)–3, ಕಾಲ: 33.98 ಸೆ.

4x100 ಮೀ. ಫ್ರೀಸ್ಟೈಲ್ ಮಿಶ್ರ ರಿಲೇ: ಕರ್ನಾಟಕ (ರುಜುಲಾ ಎಸ್‌., ಲತಿಶಾ ಮಂದಣ್ಣ, ಆಕಾಶ್‌ ಮಣಿ, ತನಿಶ್‌ ಜಾರ್ಜ್ ಮ್ಯಾಥ್ಯೂ)–1, ತಮಿಳುನಾಡು)–2, ರೈಲ್ವೆ ಕ್ರೀಡಾ ನಿಯಂತ್ರಣ ಮಂಡಳಿ –3, ಕಾಲ: 3ನಿ.41.18 ಸೆ., ನೂತನ ದಾಖಲೆ, ಹಳೆಯದು: ಕರ್ನಾಟಕ 3ನಿ.42.92 ಸೆ.

ಮಿಶ್ರ 4x100 ಫ್ರೀಸ್ಟೈಲ್‌ನಲ್ಲಿ ಕೂಟ ದಾಖಲೆ ಬರೆದ ಕರ್ನಾಟಕದ (ಎಡದಿಂದ) ರುಜುಲಾ ಎಸ್ ಲತೀಶಾ ಮಂದರ್ಣ ತನಿಶ್‌ ಜಾರ್ಜ್ ಮ್ಯಾಥ್ಯೂ ಮತ್ತು ಆಕಾಶ್ ಮಣಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.