ಬೆಂಗಳೂರು: ಕರ್ನಾಟಕ ತಂಡ ಒಡಿಶಾದ ಭುವನೇಶ್ವರದಲ್ಲಿ ಮುಕ್ತಾಯವಾದ 40ನೇ ಸಬ್ ಜೂನಿಯರ್ ಮತ್ತು 50ನೇ ಜೂನಿಯರ್ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು. ರಾಜ್ಯ ತಂಡ ಒಟ್ಟಾರೆ 799 ಅಂಕ ಕಲೆ ಹಾಕಿತು.
ಬಾಲಕಿಯರ ಗುಂಪು –2ರಲ್ಲಿ 5 ಪದಕಗಳನ್ನು ಜಯಿಸಿದ ರಾಜ್ಯದ ಧೀನಿಧಿ ದೇಸಿಂಗು ಅತ್ಯುತ್ತಮ ಈಜುಗಾರ್ತಿ ಪ್ರಶಸ್ತಿ ಪಡೆದುಕೊಂಡರು.
ಕರ್ನಾಟಕದ ಸ್ಪರ್ಧಿಗಳ ಫಲಿತಾಂಶಗಳು: ಬಾಲಕರ ಗುಂಪು–1: 100 ಮೀ. ಫ್ರೀಸ್ಟೈಲ್: ಚಿಂತನ್ ಎಸ್.ಶೆಟ್ಟಿ (52.87ಸೆ)–2, ಆರ್ಯನ್ ಕೈಲಾಸ್ (53.08)–3. 100 ಮೀ. ಬ್ರೆಸ್ಟ್‌ಸ್ಟ್ರೋಕ್: ಸೂರ್ಯ ಜ್ಯೋಯಪ್ಪ (1ನಿ 07.57ಸೆ)–2, ಕ್ರಿಷ್ ಸುಕುಮಾರ್ (1ನಿ 07.64ಸೆ)–3. ಗುಂಪು–2: 400 ಮೀ. ಮೆಡ್ಲೆ:ದ್ರುಪದ್ ರಾಮಕೃಷ್ಣ (4ನಿ 57.12ಸೆ)–3. 100 ಮೀ. ಫ್ರೀ ಸ್ಟೈಲ್: ಅಕ್ಷಜ್ ಠಾಕೂರಿಯಾ (55.40ಸೆ)–1, ರಿಷಿತ್ ರಂಗನ್ (56.41)–3.
ಬಾಲಕಿಯರ ಗುಂಪು–1: 200 ಮೀ.ಮೆಡ್ಲೆ: ಮಾನವಿ ವರ್ಮಾ (2ನಿ 25.83ಸೆ)–1, ತಾನ್ಯಾ ಷಡಕ್ಷರಿ (2ನಿ 28.38ಸೆ)–2.100 ಮೀ.ಫ್ರೀಸ್ಟೈಲ್: ಋಜುಲಾ ಎಸ್. (58.76)–1. ಗುಂಪು–2: 200 ಮೀ. ಮೆಡ್ಲೆ: ಧೀನಿಧಿ ದೇಸಿಂಗು (2ನಿ 26.97)–1. 100 ಮೀ ಫ್ರೀಸ್ಟೈಲ್: ಧೀನಿಧಿ ದೇಸಿಂಗು (57.75ಸೆ)–1. ಗುಂಪು–3: 50 ಮೀ ಬ್ರೆಸ್ಟ್‌ಸ್ಟ್ರೋಕ್: ಶ್ರೇಯಾ ಸುರೇಶ್ ಪೂಜಾರ್ (39.62ಸೆ)–3.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.