ಬೆಳಗಾವಿ: ಮೋಹಿತ್ ದೀಪಕ್ ಬೆಳವಡಿ ಮತ್ತು ಸಾಕ್ಷ್ಯಾ ಸಂತೋಷ್ ಅವರು ವಿನಯಾ ಕೋಟ್ಯಾನ್ ಸ್ಮರಣಾರ್ಥ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 13 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.
ಬೆಳಗಾವಿ ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆ ಆಶ್ರಯದಲ್ಲಿ ಟಿಳಕವಾಡಿ ಕ್ಲಬ್‌ನಲ್ಲಿ ನಡೆದ ಬಾಲಕರ ವಿಭಾಗದ ಫೈನಲ್‌ನಲ್ಲಿ ಮೋಹಿತ್ 11–6, 14–12, 7–11, 13–11ರಿಂದ ದೀಪಕ್ ವಿನಯ್ ಅವರನ್ನು ಪರಾಭವಗೊಳಿಸಿದರು.
ಸೆಮಿಫೈನಲ್ ಪಂದ್ಯಗಳಲ್ಲಿ ದೀಪಕ್ ಅವರು 14–12, 18–16, 11–9ರಿಂದ ಹರ್ಷಿತ‌್ ವಿರುದ್ಧ ಹಾಗೂ ಮೋಹಿತ್ 12–10, 7–11, 12–10, 11–9ರಿಂದ ಸುಚೇತ್ ಧರೆಣ್ಣವರ್ ವಿರುದ್ಧ ಜಯಗಳಿಸಿದ್ದರು.
ಬಾಲಕಿಯರ ಫೈನಲ್‌ನಲ್ಲಿ ಸಾಕ್ಷ್ಯಾ 11–6, 12–14, 11–8, 8–11, 11–7ರಿಂದ ಲಕ್ಷ್ಮಿ ಆಶ್ರಿತಾ ವಿರುದ್ಧ ಜಯಗಳಿಸಿದರು.
ಸೆಮಿಫೈನಲ್ ಪಂದ್ಯಗಳಲ್ಲಿ ಲಕ್ಷ್ಮಿ 5–11, 11–7, 4–11, 11–6, 11–9ರಿಂದ ಯುಕ್ತಾ ಹರ್ಷ ಅವರನ್ನು ಹಾಗೂ ಸಾಕ್ಷ್ಯಾ ಅವರು 11–7, 14–12, 11–9ರಿಂದ ಮಿಹಿಕಾ ಆರ್. ಉಡುಪ ಅವರನ್ನು ಮಣಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.