ADVERTISEMENT

ಟಾಟಾ ಮಾಸ್ಟರ್ಸ್‌ ಚೆಸ್‌ ಟೂರ್ನಿ: ಗೆಲುವಿನ ಹಳಿಗೆ ಗುಕೇಶ್‌

ಪಿಟಿಐ
Published 26 ಜನವರಿ 2026, 17:07 IST
Last Updated 26 ಜನವರಿ 2026, 17:07 IST
ಗುಕೇಶ್‌
ಗುಕೇಶ್‌   

ವಿಯ್ನ್‌ ಆನ್‌ ಝೀ (ನೆದರ್ಲೆಂಡ್ಸ್‌): ಸತತ ಎರಡು ಸೋಲುಗಳ ಬಳಿಕ ಪುಟಿದೆದ್ದ ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರು ಟಾಟಾ ಮಾಸ್ಟರ್ಸ್‌ ಚೆಸ್‌ ಟೂರ್ನಿಯಲ್ಲಿ ಗೆಲುವಿನ ಹಳಿಗೆ ಮರಳಿದರು.

ಭಾರತದ ಗ್ರ್ಯಾಂಡ್‌ಮಾಸ್ಟರ್‌ ಸೋಮವಾರ ನಡೆದ ಎಂಟನೇ ಸುತ್ತಿನಲ್ಲಿ ಸ್ಲೊವೇನಿಯಾದ ವ್ಲಾದಿಮಿರ್‌ ಫೆಡೊಸೀವ್‌ ಅವರನ್ನು ಮಣಿಸಿದರು. ಗುಕೇಶ್ ಕಪ್ಪು ಕಾಯಿಯಲ್ಲಿ ಆಡಿದ ಗುಕೇಶ್‌ 41 ಚಲನೆಯಲ್ಲಿ ಆಟವನ್ನು ಮುಗಿಸಿದರು. 

ಆರಂಭಿಕ ನಾಲ್ಕು ಡ್ರಾಗಳ ನಂತರ ಐದನೇ ಸುತ್ತಿನಲ್ಲಿ ಗೆಲುವು ಸಾಧಿಸಿದ್ದ ಗುಕೇಶ್‌, ನಂತರದ ಎರಡು ಸುತ್ತಿನಲ್ಲಿ ಮುಗ್ಗರಿಸಿದ್ದರು. ಒಟ್ಟು 4 ಅಂಕಗಳೊಂದಿಗೆ ಭಾರತದ ಆಟಗಾರರ ಪೈಕಿ ಮುಂಚೂಣಿಯಲ್ಲಿದ್ದಾರೆ. ಟೂರ್ನಿಯು ಒಟ್ಟು 13 ಸುತ್ತುಗಳನ್ನು ಒಳಗೊಂಡಿವೆ.

ADVERTISEMENT

ಭಾರತದ ಅರ್ಜುನ್‌ ಇರಿಗೇಶಿ (3.5) ಅವರು ಸ್ವದೇಶದ ಅರವಿಂದ ಚಿದಂಬರಂ (2.5) ಅವರೊಂದಿಗೆ ಡ್ರಾ ಮಾಡಿಕೊಂಡರು. ಆರ್‌. ಪ್ರಜ್ಞಾನಂದ (3) ಅವರು ಟರ್ಕಿಯ ಯಾಗಿಝ್ ಕಾನ್ ಎರ್ಡೋಗ್ಮಸ್ (4.5) ಅವರೊಂದಿಗೆ ಅಂಕ ಹಂಚಿಕೊಂಡರು.

ಈ ಮಧ್ಯೆ ಸ್ಥಳೀಯ ನೆಚ್ಚಿನ ಆಟಗಾರ ಅನೀಶ್ ಗಿರಿ ಅವರು ಉಜ್ಬೇಕಿಸ್ತಾನ ನಾದಿರ್ಬೆಕ್ ಅಬ್ದುಸತ್ತಾರೋವ್ ಅವರಿಗೆ ಆಘಾತ ನೀಡಿದರು. ಈ ಸೋಲಿನ ಹೊರತಾಗಿಯೂ ನಾದಿರ್ಬೆಕ್ 5.5 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಉಜ್ಬೇಕಿಸ್ತಾನದ ಮತ್ತೊಬ್ಬ ಆಟಗಾರ ಜಾವೊಖಿರ್ ಸಿಂದರೋವ್ (5) ಎರಡನೇ ಸ್ಥಾನದಲ್ಲಿದ್ದಾರೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.