ADVERTISEMENT

ಅಥ್ಲೆಟಿಕ್ಸ್‌: ತೇಜಶ್ವಿನ್ ಶಂಕರ್‌ಗೆ ಚಿನ್ನದ ಪದಕ

ಪಿಟಿಐ
Published 16 ಮೇ 2021, 14:06 IST
Last Updated 16 ಮೇ 2021, 14:06 IST
ತೇಜಸ್ವಿನ್ ಶಂಕರ್ –ಟ್ವಿಟರ್ ಚಿತ್ರ
ತೇಜಸ್ವಿನ್ ಶಂಕರ್ –ಟ್ವಿಟರ್ ಚಿತ್ರ   

ನವದೆಹಲಿ: ಭಾರತದ ಹೈಜಂಪ್ ಪಟು ತೇಜಶ್ವಿನ್ ಶಂಕರ್ ಅವರು ಅಮೆರಿಕದ ಮನ್ಹಾಟನ್‌ನಲ್ಲಿ ನಡೆಯುತ್ತಿರುವ ‘ದಿ ಬಿಗ್ 12‘ ಹೊರಾಂಗಣ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

ಕನಾಸಸ್ ಸ್ಟೇಟ್ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುತ್ತಿರುವ ತೇಜಸ್ವಿನ್ ಶನಿವಾರ ನಡೆದ ಸ್ಪರ್ಧೆಯಲ್ಲಿ 2.28 ಮೀಟರ್ಸ್ ಸಾಧನೆ ಮಾಡಿದರು. ಒಕ್ಲಹೊಮಾ ವಿಶ್ವವಿದ್ಯಾಲಯದ ವೆರ್ನನ್ ಟರ್ನರ್ (2.25 ಮೀ) ಮತ್ತು ಟೆಕ್ ವಿಶ್ವವಿದ್ಯಾಲಯದ ಜೆಕ್ವನ್ ಹೊಗಾನ್ (2.11 ಮೀ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು.

ಇದು ಈ ಬಾರಿ ತೇಜಸ್ವಿನ್ ಅವರ ಅತ್ಯುತ್ತಮ ಸಾಧನೆಯಾಗಿದೆ. ಆದರೆ ವೈಯಕ್ತಿಕ ಗರಿಷ್ಠ ಸಾಧನೆಗಿಂತ ಒಂದು ಸೆಂಟಿಮೀಟರ್ ಕಡಿಮೆಯಾಗಿದೆ. 2018ರಲ್ಲಿ 2.20 ಮೀಟರ್ಸ್ ಎತ್ತರ ಜಿಗಿದು ಅವರು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. 2019ರಲ್ಲೂ ತೇಜಸ್ವಿನ್ ಚಿನ್ನ ಗೆದ್ದಿದ್ದರು. ಕೋವಿಡ್‌ನಿಂದಾಗಿ ಕಳೆದ ವರ್ಷ ಕೂಟ ನಡೆದಿರಲಿಲ್ಲ. 22 ವರ್ಷದ ತೇಜಸ್ವಿನ್ 2017ರಿಂದ ಅಮೆರಿದಲ್ಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.