ADVERTISEMENT

ಡೆಕಾಥ್ಲಾನ್: ದಾಖಲೆ ಉತ್ತಮಪಡಿಸಿದ ತೇಜಸ್ವಿನ್‌

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 18:52 IST
Last Updated 28 ಜುಲೈ 2025, 18:52 IST
ತೇಜಸ್ವಿನ್ ಶಂಕರ್
ತೇಜಸ್ವಿನ್ ಶಂಕರ್   

ನವದೆಹಲಿ: ಭಾರತದ ತೇಜಸ್ವಿನ್ ಶಂಕರ್ ಅವರು ಪೋಲೆಂಡ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್‌ನ ಟೂರ್‌ ಗೋಲ್ಡ್‌ ಮಟ್ಟದ ಚಾಂಪಿಯನ್‌ಷಿಪ್‌ನ ಡೆಕಾಥ್ಲಾನ್ ಸ್ಪರ್ಧೆಯಲ್ಲಿ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದಾರೆ.

ತೇಜಸ್ವಿನ್, ಈ ಸ್ಪರ್ಧೆಯಲ್ಲಿ 7,800ಕ್ಕೂ ಅಧಿಕ ಅಂಕ ಪಡೆದ ಭಾರತದ ಮೊದಲ ಅಥ್ಲೀಟ್‌ ಎಂಬ ಹಿರಿಮೆಗೂ ಪಾತ್ರವಾದರು.

10 ವಿಭಾಗಗಳನ್ನು ಒಳಗೊಂಡ ಸ್ಪರ್ಧೆಯಲ್ಲಿ ತೇಜಸ್ವಿನ್‌ ಒಟ್ಟು 7,826 ಪಾಯಿಂಟ್ಸ್‌ಗಳೊಂದಿಗೆ ನಾಲ್ಕನೇ ಸ್ಥಾನ ಪಡೆದರು. ಚೀನಾದ ಹಾಂಗ್‌ಝೌನಲ್ಲಿ 2023ರಲ್ಲಿ ನಡೆದಿದ್ದ ಏಷ್ಯನ್‌ ಗೇಮ್ಸ್‌ ಕೂಟದಲ್ಲಿ ಅವರು 7,666 ಅಂಕ ಗಳಿಸಿದ್ದರು. ಅದು ಈವರೆಗಿನ ರಾಷ್ಟ್ರೀಯ ದಾಖಲೆಯಾಗಿತ್ತು.

ADVERTISEMENT

26 ವರ್ಷ ವಯಸ್ಸಿನ ತೇಜಸ್ವಿನ್‌, 100 ಮೀ. ಓಟ (11.02 ಸೆ.) ಹಾಗೂ 1,500 ಮೀ. ಓಟದಲ್ಲಿಯೂ (4 ನಿ., 31.80 ಸೆ.) ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿ ಗಮನ ಸೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.