ADVERTISEMENT

ಶೂಟಿಂಗ್‌: ಶೂಟರ್ ತೇಜಸ್ವಿನಿ ಸಾವಂತ್‌ಗೆ ಅಗ್ರಸ್ಥಾನ

ಪಿಟಿಐ
Published 11 ಜನವರಿ 2021, 14:42 IST
Last Updated 11 ಜನವರಿ 2021, 14:42 IST
ಶೂಟರ್ ತೇಜಸ್ವಿನಿ ಸಾವಂತ್‌–ಪಿಟಿಐ ಚಿತ್ರ
ಶೂಟರ್ ತೇಜಸ್ವಿನಿ ಸಾವಂತ್‌–ಪಿಟಿಐ ಚಿತ್ರ   

ನವದೆಹಲಿ: ಅಂಜುಮ್‌ ಮೌದ್ಗಿಲ್ ಸವಾಲು ಮೀರಿದ ಅನುಭವಿ ಶೂಟರ್ ತೇಜಸ್ವಿನಿ ಸಾವಂತ್ ಅವರು ಮಹಿಳೆಯರ 50 ಮೀಟರ್ ರೈಫಲ್ ತ್ರಿ ಪೋಸಿಷನ್ಸ್ ಟಿ1 ಟ್ರಯಲ್ಸ್‌ನಲ್ಲಿ ಅಗ್ರಸ್ಥಾನ ಗಳಿಸಿದರು.

ಇಲ್ಲಿಯ ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆಯುತ್ತಿರುವ ಟ್ರಯಲ್ಸ್‌ನಲ್ಲಿ, ಮಹಾರಾಷ್ಟ್ರದ ತೇಜಸ್ವಿನಿ 458.7 ಪಾಯಿಂಟ್ಸ್ ಗಳಿಸಿದರು. ಅರ್ಹತಾ ಸುತ್ತಿನಲ್ಲಿ ಅವರು 1171 ಪಾಯಿಂಟ್ಸ್ ಕಲೆಹಾಕಿದ್ದರು.

ಫೈನಲ್ಸ್‌ನಲ್ಲಿಅಂಜುಮ್ 457.8 ಪಾಯಿಂಟ್ಸ್ ಗಳಿಸಿದರು. ಅರ್ಹತಾ ಸುತ್ತನ್ನು ಅಂಜುಮ್‌ (1167) ಮೂರನೆಯವರಾಗಿ ಕೊನೆಗೊಳಿಸಿದ್ದರು. ಮಧ್ಯಪ್ರದೇಶದ ಸುನಿಧಿ ಚೌಹಾನ್‌ (1168) ಎರಡನೇ ಸ್ಥಾನ ಗಳಿಸಿದ್ದರು.

ADVERTISEMENT

ಅರ್ಹತಾ ಸುತ್ತಿನಲ್ಲಿ ಎಂಟನೇ ಸ್ಥಾನ ಗಳಿಸಿದ್ದ ಹರಿಯಾಣದ ನಿಶ್ಚಲ್‌, ಫೈನಲ್ಸ್‌ನಲ್ಲಿ ಮೂರನೇ ಸ್ಥಾನ ಗಳಿಸಿ ಬೆರಗು ಮೂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.