ADVERTISEMENT

ಶೂಟಿಂಗ್‌: ತೇಜಸ್ವಿನಿಗೆ ಅಗ್ರಸ್ಥಾನ

ಪಿಟಿಐ
Published 27 ಮೇ 2021, 21:36 IST
Last Updated 27 ಮೇ 2021, 21:36 IST
ತೇಜಸ್ವಿನಿ ಸಾವಂತ್ –ರಾಯಿಟರ್ಸ್‌ ಚಿತ್ರ
ತೇಜಸ್ವಿನಿ ಸಾವಂತ್ –ರಾಯಿಟರ್ಸ್‌ ಚಿತ್ರ   

ನವದೆಹಲಿ: ಮಾಜಿ ವಿಶ್ವ ಚಾಂಪಿಯನ್‌, ಭಾರತದ ತೇಜಸ್ವಿನಿ ಸಾವಂತ್ ಅವರು ಕ್ರೊವೇಷ್ಯಾದಲ್ಲಿ ನಡೆಯುತ್ತಿರುವ ಯುರೋಪಿಯನ್ ಶೂಟಿಂಗ್ ಚಾಂಪಿಯನ್‌ಷಿಪ್‌ನ ಕನಿಷ್ಠ ಅರ್ಹತಾ ಸ್ಕೋರ್‌ (ಎಂಕ್ಯುಎಸ್‌) ಸುತ್ತಿನಲ್ಲಿ ಅಗ್ರ ಸ್ಥಾನ ಗಳಿಸಿದ್ದಾರೆ.

ಗುರುವಾರ ನಡೆದ ಮಹಿಳೆಯರ 50 ಮೀಟರ್ಸ್‌ ರೈಫಲ್ ತ್ರಿ ಪೊಸಿಷನ್‌ನಲ್ಲಿ ಮಹಾರಾಷ್ಟ್ರದ ತೇಜಸ್ವಿನಿ 622.7 ಸ್ಕೋರು ಗಳಿಸಿ ಭಾರತದ ಮೂವರು ಮತ್ತು ಇರಾನ್‌ನ ಆರು ಸ್ಪರ್ಧಿಗಳನ್ನು ಹಿಂದಿಕ್ಕಿದರು.

ಯುವ ಶೂಟರ್‌ ಐಶ್ವರ್ಯಾ ಪ್ರತಾತ್ ಸಿಂಗ್ ತೋಮರ್ 620.3 ‍ಸ್ಕೋರು ಗಳಿಸಿದರೆ ಸಂಜೀವ್ ರಜಪೂತ್ 619.7 ಮತ್ತು ಅಂಜುಮ್ ಮೌದ್ಗಿಲ್619.2 ಸ್ಕೋರ್ ದಾಖಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.