ADVERTISEMENT

ಟೋಕಿಯೊ ಒಲಿಂಪಿಕ್ಸ್‌: ಚಿನ್ನ ಗೆಲ್ಲುವವರಿಗೆ ಐಒಎದಿಂದ ₹ 75 ಲಕ್ಷ

ಪಿಟಿಐ
Published 22 ಜುಲೈ 2021, 16:41 IST
Last Updated 22 ಜುಲೈ 2021, 16:41 IST
ಮರಳಿನ ಕಲಾಕೃತಿಗಳಿಗೆ ಪ್ರಸಿದ್ಧರಾಗಿರುವ ಸುದರ್ಶನ್ ಪಟ್ನಾಯಕ್ ಭಾರತದ ಕ್ರೀಡಾಪಟುಗಳಿಗೆ ಬೆಂಬಲ ಸೂಚಿಸಿ ಪುರಿಯಲ್ಲಿ ಗುರುವಾರ ಕಲೆಯನ್ನು ಅರಳಿಸಿದರು –ಪಿಟಿಐ ಚಿತ್ರ
ಮರಳಿನ ಕಲಾಕೃತಿಗಳಿಗೆ ಪ್ರಸಿದ್ಧರಾಗಿರುವ ಸುದರ್ಶನ್ ಪಟ್ನಾಯಕ್ ಭಾರತದ ಕ್ರೀಡಾಪಟುಗಳಿಗೆ ಬೆಂಬಲ ಸೂಚಿಸಿ ಪುರಿಯಲ್ಲಿ ಗುರುವಾರ ಕಲೆಯನ್ನು ಅರಳಿಸಿದರು –ಪಿಟಿಐ ಚಿತ್ರ   

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವವರಿಗೆ ₹ 75 ಲಕ್ಷ ನೀಡಲಾಗುವುದು ಎಂದು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಗುರುವಾರ ತಿಳಿಸಿದೆ. ಬೆಳ್ಳಿ ಪದಕ ಗೆಲ್ಲುವವರಿಗೆ ₹ 40 ಲಕ್ಷ ಮತ್ತು ಕಂಚಿನ ಪದಕ ಗಳಿಸುವವರಿಗೆ ₹ 25 ಲಕ್ಷ, ದೇಶವನ್ನು ಪ್ರತಿನಿಧಿಸುವ ಪ್ರತಿಯೊಬ್ಬರಿಗೆ ತಲಾ ಒಂದು ಲಕ್ಷ ನೀಡುವುದಾಗಿಯೂ ಹೇಳಿದೆ.

ಸಲಹಾ ಸಮಿತಿಯ ಶಿಫಾರಸುಗಳನ್ನು ಐಒಎ ಒಪ್ಪಿಕೊಂಡಿದೆ. ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಕ್ರೀಡೆಯನ್ನು ಪ್ರತಿನಿಧಿಸುವ ಫೆಡರೇಷ್‌ನ್‌ಗೆ ತಲಾ ₹ 25 ಲಕ್ಷ ಹೆಚ್ಚುವರಿ ಹಣ ನೀಡಲು ಮತ್ತು ಪದಕ ಗೆಲ್ಲುವ ಕ್ರೀಡೆಯನ್ನು ಪ್ರತಿನಿಧಿಸುವ ಫೆಡರೇಷನ್‌ಗೆ ₹ 30 ಲಕ್ಷ ನೀಡಲು, ಪ್ರತಿಯೊಬ್ಬರಿಗೆ ದಿನವೊಂದಕ್ಕೆ ₹ 50 ಭತ್ಯೆ ನೀಡಲು ಶಿಫಾರಸು ಮಾಡಿದೆ.

‘ಪದಕ ವಿಜೇತರಿಗೆ ಮತ್ತು ಪದಕ ವಿಜೇತರನ್ನು ತಯಾರು ಮಾಡುವ ಫೆಡರೇಷನ್‌ಗಳಿಗೆ ಐಒಎ ಬಹುಮಾನ ನೀಡುತ್ತಿರುವುದು ಇದೇ ಮೊದಲು’ ಎಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.