ADVERTISEMENT

ದಕ್ಷಿಣ ಆಫ್ರಿಕಾದಲ್ಲಿ ಮಹಿಳಾ ಜೂನಿಯರ್ ವಿಶ್ವಕಪ್‌ ಹಾಕಿ ಟೂರ್ನಿ

ಪಿಟಿಐ
Published 15 ನವೆಂಬರ್ 2021, 12:57 IST
Last Updated 15 ನವೆಂಬರ್ 2021, 12:57 IST
ಲಾಲ್‌ರೆಮ್ಸಿಯಾಮಿ (ಬಲ)– ರಾಯಿಟರ್ಸ್ ಚಿತ್ರ
ಲಾಲ್‌ರೆಮ್ಸಿಯಾಮಿ (ಬಲ)– ರಾಯಿಟರ್ಸ್ ಚಿತ್ರ   

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಸೀನಿಯರ್‌ ಮಹಿಳಾ ಹಾಕಿ ತಂಡದಲ್ಲಿ ಆಡಿದ್ದ ಲಾಲ್‌ರೆಮ್ಸಿಯಾಮಿ ಅವರು ಎಫ್‌ಐಎಚ್ ವಿಶ್ವಕಪ್‌ನಲ್ಲಿ ದೇಶದ ಜೂನಿಯರ್ ತಂಡವನ್ನು ಮುನ್ನಡೆಸಲಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಡಿಸೆಂಬರ್ 5ರಿಂದ ಪ್ರಾರಂಭವಾಗುವ ಟೂರ್ನಿಗೆ ಭಾರತದ 18 ಆಟಗಾರ್ತಿಯರ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ.

ವಿಶ್ವದ ಪ್ರಮುಖ 16 ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು, 2016ರ ಟೂರ್ನಿಯಲ್ಲಿ ಅರ್ಜೆಂಟೀನಾ ಚಾಂಪಿಯನ್ ಆಗಿತ್ತು.

ADVERTISEMENT

21 ವರ್ಷದ ಲಾಲ್‌ರೆಮ್ಸಿಯಾಮಿ ತಂಡದ ನಾಯಕತ್ವ ವಹಿಸಿದ್ದರೆ, ಇಶಿಕಾ ಚೌಧರಿ ಉಪನಾಯಕಿಯ ಜವಾಬ್ದಾರಿ ನಿಭಾಯಿಸಲಿದ್ದಾರೆ. ಟೋಕಿಯೊ ಕೂಟದಲ್ಲಿ ಆಡಿದ್ದ ಸಲೀಮಾ ಟೆಟೆ ಹಾಗೂ ಶರ್ಮಿಳಾ ದೇವಿ ಕೂಡ ಜೂನಿಯರ್‌ ತಂಡದ ಪರ ಕಣಕ್ಕಿಳಿಯಲಿದ್ದಾರೆ.

ಪ‍್ರೀತಿ ಮತ್ತು ಪ್ರಭಲೀನ್ ಕೌರ್ ಅವರನ್ನು ಕಾಯ್ದಿರಿಸಿದ ಆಟಗಾರ್ತಿಯರಾಗಿ ತಂಡದೊಂದಿಗೆ ತೆರಳಲಿದ್ದಾರೆ.

2013ರ ಆವೃತ್ತಿಯಲ್ಲಿ ಇಂಗ್ಲೆಂಡ್‌ಅನ್ನು ಮಣಿಸಿ ಕಂಚಿನ ಪದಕ ಗೆದ್ದಿದ್ದು ಭಾರತ ಜೂನಿಯರ್ ತಂಡದ ಇದುವರೆಗಿನ ಶ್ರೇಷ್ಠ ಸಾಧನೆಯಾಗಿದೆ. ಈ ಬಾರಿ ತಂಡವು ‘ಸಿ‘ ಗುಂಪಿನಲ್ಲಿ ಸ್ಥಾನ ಪಡೆದಿದ್ದು,ಡಿಸೆಂಬರ್‌ 6ರಂದು ಮೊದಲ ಪಂದ್ಯದಲ್ಲಿ ರಷ್ಯಾ ತಂಡವನ್ನು ಎದುರಿಸಲಿದೆ.

ಡಿಸೆಂಬರ್ 10 ಮತ್ತು 16ರಂದು ನಾಕೌಟ್ ಪಂದ್ಯಗಳು ನಿಗದಿಯಾಗಿವೆ.

ಭಾರತ ತಂಡ: ಲಾಲ್‌ರೆಮ್ಸಿಯಾಮಿ (ನಾಯಕಿ), ಇಶಿಕಾ ಚೌಧರಿ (ಉಪನಾಯಕಿ), ಬಿಚು ದೇವಿ ಖರಿಬಮ್, ಖುಷ್ಬೂ (ಇಬ್ಬರೂ ಗೋಲ್‌ಕೀಪರ್‌ಗಳು), ಅಕ್ಷತಾ ಅಬಾಸೊ ಧೇಖಾಲೆ, ಪ್ರಿಯಾಂಕಾ, ಮರೀನಾ ಲಾಲ್‌ರಾಮ‌ಘಾಕಿ, ಅಜ್ಮಿನಾ ಕುಜೂರ್, ಬಲ್ಜೀತ್ ಕೌರ್, ರೀತ್, ವೈಷ್ಣವಿ ವಿಠ್ಠಲ್ ಫಾಲ್ಕೆ, ಸಲೀಮಾ ಟೆಟೆ, ಶರ್ಮಿಳಾ ದೇವಿ, ಬ್ಯೂಟಿ ಡಂಗ್‌ಡಂಗ್, ದೀಪಿಕಾ, ಮುಮ್ತಾಜ್ ಖಾನ್, ಸಂಗೀತಾ ಕುಮಾರಿ, ಜೀವನ್ ಕಿಶೋರಿ ಟೊಪ್ಪೊ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.