ADVERTISEMENT

ಭ್ರಷ್ಟಾಚಾರದ ಆರೋಪ: ಒಲಿಂಪಿಕ್‌ ಸಮಿತಿ ಮುಖ್ಯಸ್ಥ ರಾಜೀನಾಮೆ

ರಾಯಿಟರ್ಸ್
Published 20 ಮಾರ್ಚ್ 2019, 1:42 IST
Last Updated 20 ಮಾರ್ಚ್ 2019, 1:42 IST
ಸುನೆಕಜು ತಕೇಡ
ಸುನೆಕಜು ತಕೇಡ   

ಟೋಕಿಯೊ: ಭ್ರಷ್ಟಾಚಾರದ ಆರೋಪ ಹೊತ್ತಿರುವ ಜಪಾನ್ ಒಲಿಂಪಿಕ್ ಸಮಿತಿ ಮುಖ್ಯಸ್ಥ ಸುನೆಕಜು ತಕೇಡ ತಮ್ಮ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ.

2020ರ ಒಲಿಂಪಿಕ್ಸ್‌ಗೆ ಬಿಡ್ ಸಲ್ಲಿಸಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆಸಿರುವ ಆರೋಪದ ಮೇಲೆ ತಕೇಡ ಅವರನ್ನು ಫ್ರಾನ್ಸ್‌ನ ತನಿಖಾಧಿಕಾರಿಗಳು ಡಿಸೆಂಬರ್‌ ತಿಂಗಳಲ್ಲಿ ವಿಚಾರಣೆಗೆ ಒಳಪಡಿಸಿದ್ದರು. ಅವರು ಬಿಡ್ಡಿಂಗ್ ಸಮಿತಿಯ ಅಧ್ಯಕ್ಷರಾಗಿದ್ದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಕೇಡ ‘ಭ್ರಷ್ಟಾಚಾರ ಆರೋಪ ಕೇಳಿ ಅಚ್ಚರಿಯಾಗಿದ್ದು ಕಿರಿಕಿರಿಯೂ ಆಗಿದೆ. ಆದ್ದರಿಂದ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.