ADVERTISEMENT

Tokyo Olympics: ಬೀಚ್‌ ವಾಲಿಬಾಲ್‌ನಲ್ಲಿ ಚಿನ್ನ ಗೆದ್ದ ಅಮೆರಿಕ

ಏಜೆನ್ಸೀಸ್
Published 6 ಆಗಸ್ಟ್ 2021, 11:17 IST
Last Updated 6 ಆಗಸ್ಟ್ 2021, 11:17 IST
ಅಮೆರಿಕದ ಅಪ್ರಿಲ್ ರಾಸ್‌ ಹಾಗೂ ಅಲಿಕ್ಸ್ ಕ್ಲೈನ್‌ಮನ್‌ –ಎಎಫ್‌ಪಿ ಚಿತ್ರ
ಅಮೆರಿಕದ ಅಪ್ರಿಲ್ ರಾಸ್‌ ಹಾಗೂ ಅಲಿಕ್ಸ್ ಕ್ಲೈನ್‌ಮನ್‌ –ಎಎಫ್‌ಪಿ ಚಿತ್ರ   

ಟೋಕಿಯೊ: ಆಸ್ಟ್ರೇಲಿಯಾ ಆಟಗಾರ್ತಿಯರ ಸವಾಲನ್ನು ಹಿಮ್ಮೆಟ್ಟಿಸಿದ ಅಮೆರಿಕದ ಅಪ್ರಿಲ್ ರಾಸ್‌ ಹಾಗೂ ಅಲಿಕ್ಸ್ ಅಲಿಕ್ಸ್ ಕ್ಲೈನ್‌ಮನ್‌ ಒಲಿಂಪಿಕ್ಸ್‌ನ ಮಹಿಳಾ ಬೀಚ್‌ ವಾಲಿಬಾಲ್‌ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡರು. ಲಂಡನ್‌ನಲ್ಲಿ ಬೆಳ್ಳಿ, ರಿಯೊದಲ್ಲಿ ಕಂಚಿನ ಪ‍ದಕ ವಿಜೇತರಾಗಿದ್ದ ರಾಸ್‌, ಇಲ್ಲಿ ಪದಕಕ್ಕೆ ಚಿನ್ನದ ಹೊಳಪು ತಂದುಕೊಂಡರು.

ಶುಕ್ರವಾರ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಅಮೆರಿಕ ಜೋಡಿಯು 21–15, 21–16ರಿಂದ ಮರಿಯಾಫ್‌ ಅರ್ಟಾಚೊ ಡೆಲ್ ಸೊಲಾರ್‌ ಮತ್ತು ಟಾಲಿಕ್ ಕ್ಲ್ಯಾನ್ಸಿ ಅವರನ್ನು ಸೋಲಿಸಿದರು. ಟೋಕಿಯೊದ ಸುಡುಬಿಸಿಲಿನಲ್ಲಿ ನಡೆದ ಈ ಪಂದ್ಯವು 43 ನಿಮಿಷಗಳಲ್ಲಿ ಮುಕ್ತಾಯವಾಯಿತು. 33 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ಆಟಗಾರ್ತಿಯರು ಬಳಲಿದರು.

ಕಂಚಿನ ಪದಕಕ್ಕಾಗಿ ನಡೆದ ಸೆಣಸಾಟದಲ್ಲಿ ಸ್ವಿಟ್ಜರ್ಲೆಂಡ್‌ನ ಜೋವಾನ ಹೆಡ್ರಿಚ್‌ ಮತ್ತು ಅನೌಕ್‌ ವರ್ಜ್ ಡೆಪ್ರೆ ಅವರು ಲಾಟ್ವಿಯಾದ ಅನಸ್ಟೇಸಿಯಾ ಕ್ರಾವ್ಸೆನೊಕಾ ಮತ್ತು ಟೀನಾ ಗ್ರಾವುಡಿನಾ ಅವರನ್ನು ಪರಾಭವಗೊಳಿಸಿದರು. ಸ್ವಿಸ್ ಜೋಡಿಗೆ 21–19, 21–15ರಿಂದ ಜಯ ಒಲಿಯಿತು.

ADVERTISEMENT

21 ವರ್ಷಗಳ ನಂತರ ಬೀಚ್‌ ವಾಲಿಬಾಲ್‌ನಲ್ಲಿ ಆಸ್ಟ್ರೇಲಿಯಾಕ್ಕೆ ಪದಕ ದಕ್ಕಿತು. 2000ರ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ನತಾಲಿ ಕುಕ್‌ ಮತ್ತು ಕೆರ್ರಿ ಪೊಟ್ಟಾಸ್ಟ್ ಚಿನ್ನದ ಪದಕ ಗೆದ್ದಿದ್ದರು.

ಫೈನಲ್ ಪಂದ್ಯದ ಸ್ಕೋರ್‌

ದೇಶ ಸೆಟ್‌ 1 ಸೆಟ್ 2
ಅಮೆರಿಕ 21 21
ಆಸ್ಟ್ರೇಲಿಯಾ 15 16

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.