ಟೋಕಿಯೊ: ಜನಾಂಗೀಯ ನಿಂದನೆ ಮಾಡಿದ ಆರೋಪದಡಿ ಟೀಕೆಗೆ ಗುರಿಯಾಗಿರುವ ಜರ್ಮನಿ ಸೈಕ್ಲಿಂಗ್ ಫಡರೇಷನ್‌ನ ನಿರ್ದೇಶಕ ಪ್ಯಾಟ್ರಿಕ್ ಮೊಸ್ಟರ್ ಕ್ಷಮೆ ಕೋರಿದ್ದಾರೆ. ಸ್ಪರ್ಧೆಯ ಸಂದರ್ಭದಲ್ಲಿ ತನ್ನ ದೇಶದ ಸೈಕ್ಲಿಸ್ಟ್‌ಗಳನ್ನು ಹುರಿದುಂಬಿಸುವ ಭರದಲ್ಲಿ ಅಲ್ಜೀರಿಯಾದ ಕ್ರೀಡಾಪಟುವನ್ನು ಪ್ಯಾಟ್ರಿಕ್ ನಿಂದಿಸಿರುವುದು ಸಾಬೀತಾಗಿತ್ತು.
ಇದು ವಿವಾದವಾಗುತ್ತಿದ್ದಂತೆ ಜರ್ಮನಿಯ ಟಿವಿ ಏಜೆನ್ಸಿಯೊಂದಿಗೆ ಮಾತಾಡಿದ ಪ್ಯಾಟ್ರಿಕ್ ‘ಆ ಕ್ಷಣದಲ್ಲಿ ಉಂಟಾಗಿದ್ದ ಉದ್ವೇಗದಿಂದ ಆಡ ಬಾರದ ಮಾತು ಆಡಿದ್ದೇನೆ. ಇದಕ್ಕೆ ಕ್ಷಮೆ ಇರಲಿ’ ಎಂದಿದ್ದಾರೆ.
ಕ್ಷಮೆ ಕೋರಿದ್ದನ್ನು ಜರ್ಮನಿ ಒಲಿಂಪಿಕ್ ಸಮಿತಿ ಅಧ್ಯಕ್ಷ ಅಲ್ಫೋನ್ಸ್ ಹೊರ್ಮೊನ್ ಸ್ವಾಗತಿಸಿದ್ದಾರೆ. ಆದರೆ ಪ್ಯಾಟ್ರಿಕ್ ಜೊತೆ
ಮಾತುಕತೆ ನಡೆಸುವುದಾಗಿ ಅವರು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.