ADVERTISEMENT

Tokyo Olympics | ಬಾಕ್ಸಿಂಗ್‌: ಒಂದು ಪಂದ್ಯ ಗೆದ್ದರೆ ಲವ್ಲಿನಾಗೆ ಪದಕ ಖಚಿತ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 12:31 IST
Last Updated 27 ಜುಲೈ 2021, 12:31 IST
ಲವ್ಲಿನಾ ಬೊರ್ಗೊಹೈನ್ ಅವರ ಆಟ
ಲವ್ಲಿನಾ ಬೊರ್ಗೊಹೈನ್ ಅವರ ಆಟ   

ಟೋಕಿಯೊ: ಭಾರತದ ಲವ್ಲಿನಾ ಬೊರ್ಗೊಹೈನ್ ಅವರು ಒಲಿಂಪಿಕ್ ಕ್ರೀಡಾಕೂಟದ ಬಾಕ್ಸಿಂಗ್‌ನಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.

ಮಂಗಳವಾರ ನಡೆದ ಮಹಿಳೆಯರ 69 ಕೆಜಿ ವಿಭಾಗದ ಪ್ರೀಕ್ವಾರ್ಟರ್‌ಫೈನಲ್‌ ಬೌಟ್‌ನಲ್ಲಿ ಅವರು 3–2ರಿಂದ ಜರ್ಮನಿಯ ನದಿನ್‌ ಅಪೆಜ್ ಅವರನ್ನು ಸೋಲಿಸಿದರು.

ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿ ಸ್ಪರ್ಧಿಸಿರುವ ಲವ್ಲಿನಾ, ಎಂಟರಘಟ್ಟದ ಹಣಾಹಣಿಯಲ್ಲಿ ಚೀನಾ ತೈಪೆಯ ನಿಯೆನ್‌ ಚಿನ್ ಚೆನ್ ಅವರನ್ನು ಎದುರಿಸಲಿದ್ದಾರೆ. ಇದೇ 30ರಂದು ಈ ಬೌಟ್‌ ನಿಗದಿಯಾಗಿದೆ.

ADVERTISEMENT

ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ನಿಯೆನ್‌ ಚಿನ್ ಚೆನ್ ಅವರನ್ನು ಸೋಲಿಸಿ, ಸೆಮಿ ಫೈನಲ್‌ಗೆ ಲಗ್ಗೆ ಹಾಕಿದರೆ ಲವ್ಲಿನಾಗೆ ಪದಕ ಖಚಿತವಾಗಲಿದೆ. ಈ ಉಪಾಂತ್ಯ ಪಂದ್ಯದಲ್ಲಿ ಸೋತರೂ ಕಂಚಿನ ಪದಕ ದೊರೆಯಲಿದೆ.

ಒಂದು ವೇಳೆ ಫೈನಲ್‌ ಪ್ರವೇಶಿಸಿದರೆ ಚಿನ್ನದ ಪದಕಕ್ಕೆ ಸೆಣಸಬೇಕಾಗುತ್ತದೆ. ಸೋತರೆ ಬೆಳ್ಳಿ ಪದಕ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.