ADVERTISEMENT

Tokyo Olympics | ಶೂಟಿಂಗ್‌ನಲ್ಲಿ ನಿರಾಸೆ; ಗುರಿ ತಪ್ಪಿದ ಅಂಜುಮ್, ತೇಜಸ್ವಿನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜುಲೈ 2021, 7:39 IST
Last Updated 31 ಜುಲೈ 2021, 7:39 IST
ಅಂಜುಮ್ ಮೌದ್ಗಿಲ್
ಅಂಜುಮ್ ಮೌದ್ಗಿಲ್   

ಟೋಕಿಯೊ: ಜಪಾನ್‌ನಲ್ಲಿ ಸಾಗುತ್ತಿರುವ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಶೂಟರ್‌ಗಳ ಸಾಲು ಸಾಲು ಕಳಪೆ ಪ್ರದರ್ಶನ ಮುಂದುವರಿದಿದೆ.

ಶನಿವಾರ ನಡೆದ ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಷನ್ಸ್ ಅರ್ಹತಾ ಸುತ್ತಿನಲ್ಲಿ ಭಾರತದ ಅಂಜುಮ್ ಮೌದ್ಗಿಲ್ ಹಾಗೂ ತೇಜಸ್ವಿನಿ ಸಾವಂತ್ ಫೈನಲ್ಸ್‌ಗೆಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾದರು.

ಈ ವಿಭಾಗದಲ್ಲಿ ಅಂಜುಮ್ ಹಾಗೂ ತೇಜಸ್ವಿನಿ ಕ್ರಮವಾಗಿ 15ನೇ ಹಾಗೂ 33ನೇ ಸ್ಥಾನ ಪಡೆದರು. ಅರ್ಹತಾ ಸುತ್ತಿನಲ್ಲಿ ಮೌದ್ಗಿಲ್ ಕೆಲವು ಹೊತ್ತು ನಿರೀಕ್ಷೆ ಮೂಡಿಸಿದರೂ ಅಂತಿಮವಾಗಿ ವೈಫಲ್ಯವನ್ನು ಅನುಭವಿಸಿದರು.

ಅಗ್ರ ಎಂಟು ಶೂಟರ್‌ಗಳು ಫೈನಲ್ಸ್‌ಗೆ ಅರ್ಹತೆಯನ್ನು ಪಡೆದಿದ್ದಾರೆ.

ಭಾರತದ ಸೌರಭ್ ಚೌಧರಿ ಪುರುಷರ ವೈಯಕ್ತಿಕ ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿರುವುದನ್ನು ಹೊರತುಪಡಿಸಿದರೆ ಇತರೆ ಯಾವ ಶೂಟರ್‌ಗಳು ಕನಿಷ್ಠ ಪದಕ ಸುತ್ತಿಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.