ADVERTISEMENT

Tokyo Olympics: ಕುಸ್ತಿಯಲ್ಲಿ ಸೋಲು ಕಂಡ ಸೋನಮ್ ಮಲಿಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಆಗಸ್ಟ್ 2021, 4:52 IST
Last Updated 3 ಆಗಸ್ಟ್ 2021, 4:52 IST
ಸೋನಮ್ ಮಲಿಕ್
ಸೋನಮ್ ಮಲಿಕ್   

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನ ಮಹಿಳೆಯರ ಕುಸ್ತಿ ವಿಭಾಗದ 62 ಕೆಜಿ ಫ್ರಿ ಸ್ಟೈಲ್ ವಿಭಾಗದಮೊದಲ ಸುತ್ತಿನಲ್ಲಿ ಭಾರತದ ಸೋನಮ್ ಮಲಿಕ್ ಅವರು ಸೋಲು ಕಂಡಿದ್ದಾರೆ.

19 ವರ್ಷದ ಸೋನಮ್ ಅವರನ್ನು ಮಂಗೋಲಿಯಾದ ಕುರೇಕು ಬೊಲೊರುತಿಯಾ ಅವರು ತೀವ್ರ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ‘ಬಿಗ್ಗರ್ ಮೂವ್‌‘ಗಳಿಂದ ಸೋಲಿಸಿದರು.

ಇಬ್ಬರೂ ಸ್ಪರ್ಧಿಗಳು ತಲಾ ಎರಡು ಅಂಕ ಪಡೆದಿದ್ದರು. ಆದರೆ, ಎರಡನೇ ಅವಧಿಯಲ್ಲಿ ಕುರೇಕು ಅವರು ಹೆಚ್ಚು ಟೆಕ್ನಿಕಲ್ ಪಾಯಿಂಟ್ ಪಡೆದಿದ್ದರಿಂದ ವಿಜಯಶಾಲಿಯಾದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.