ಬೆಂಗಳೂರು: ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಟ್ರಿನಿಟಿ ಗಾಲ್ಫ್ ಚಾಂಪಿಯನ್ಸ್ ಲೀಗ್ ಎರಡನೇ ಆವೃತ್ತಿಯು ನಡೆಯಲಿದೆ ಎಂದು ಪ್ರೊಫೆಷನಲ್ ಗಾಲ್ಫ್ ಟೂರ್ ಆಫ್ ಇಂಡಿಯಾ (ಪಿಜಿಟಿಐ) ಅಧ್ಯಕ್ಷ ಕಪಿಲ್ ದೇವ್ ಘೋಷಿಸಿದರು.
ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕಪಿಲ್, ‘ಗಾಲ್ಫ್ ಅಪಾರ ಕೌಶಲ್ಯ ಮತ್ತು ಏಕಾಗ್ರತೆ ಬೇಡುವ ಕ್ರೀಡೆಯಾಗಿದೆ. ಟಿಜಿಸಿಎಲ್‌ನ ಎರಡನೇ ಆವೃತ್ತಿಯು ವೃತ್ತಿಪರರು, ಹವ್ಯಾಸಿಗಳು ಮತ್ತು ಪ್ರಸಿದ್ಧ ಗಾಲ್ಫ್ ಆಟಗಾರರನ್ನು ತಂಡವಾಗಿ ಒಂದೆಡೆ ಸೇರಿಸಲಿದೆ‘ ಎಂದರು.
ಭಾರತದ 7 ಹಾಗೂ ಶ್ರೀಲಂಕಾದ 1 ತಂಡವು ಈ ಲೀಗ್‌ನಲ್ಲಿ ಭಾಗವಹಿಸಲಿವೆ.
‘ಇದು ಗಾಲ್ಫ್ ಅಭಿಮಾನಿಗಳಿಗೆ ವಿಶೇಷವಾದ ಕ್ರೀಡಾಕೂಟವಾಗಿರಲಿದೆ. ವಿದೇಶದ ತಂಡ ಸೇರಿದಂತೆ 8 ತಂಡಗಳನ್ನು ಈ ಟೂರ್ನಿಯಲ್ಲಿ ಆಡಲಿವೆ. ಭಾರತದ ಏಳು ನಗರಗಳನ್ನು ಪ್ರತಿನಿಧಿಸುವ ತಂಡಗಳು ಮತ್ತು ಶ್ರೀಲಂಕಾದ ಒಂದು ತಂಡ ಸ್ಪರ್ಧಿಸಲಿವೆ’ ಎಂದು ಕಪಿಲ್‌ದೇವ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.