ADVERTISEMENT

ಟೇಬಲ್‌ ಟೆನಿಸ್‌: ಏಷ್ಯನ್‌ ಗೇಮ್ಸ್‌ಗೆ ಭಾರತ ತಂಡ ಪ್ರಕಟ

ಪಿಟಿಐ
Published 20 ಜೂನ್ 2018, 17:31 IST
Last Updated 20 ಜೂನ್ 2018, 17:31 IST
 ಶರತ್ ಕಮಲ್, ಮಣಿಕಾ ಬಾತ್ರಾ
ಶರತ್ ಕಮಲ್, ಮಣಿಕಾ ಬಾತ್ರಾ   

ನವದೆಹಲಿ: ಇಂಡೋನೇಷ್ಯಾದಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಸ್ಪರ್ಧಿಸಲಿರುವ ಭಾರತ ಟೇಬಲ್ ಟೆನಿಸ್ ತಂಡದಲ್ಲಿ ಅಚಂತಾ ಶರತ್ ಕಮಲ್ ಮತ್ತು ಮಣಿಕಾ ಬಾತ್ರಾ ಸ್ಥಾನ ಪಡೆದುಕೊಂಡಿದ್ದಾರೆ.

ಒಟ್ಟು 10 ಆಟಗಾರರ ಟೇಬಲ್‌ ಟೆನಿಸ್‌ ತಂಡವನ್ನು ಭಾರತದ ಟೇಬಲ್‌ ಟೆನಿಸ್‌ ಫೇಡರೇಷನ್‌ (ಟಿಟಿಎಫ್‌ಐ) ಬುಧವಾರ ಪ್ರಕಟಿಸಿದೆ.

ಪುರುಷರ ತಂಡದಲ್ಲಿ ಸನಿಲ್‌ ಶೆಟ್ಟಿ ಬದಲಿಗೆ ಮಾನವ್‌ ಠಕ್ಕರ್‌ ಹಾಗೂ ಮಹಿಳೆಯರ ತಂಡದಲ್ಲಿ ಪೂಜಾ ಸಹಸ್ರಬುದ್ಧೆ ಬದಲಿಗೆ ಐಹಿಕಾ ಮುಖರ್ಜಿ ಅವರನ್ನು ಆಯ್ಕೆ ಮಾಡಲಾಗಿದೆ. ಅತ್ಯಾಚಾರದ ಆರೋಪ ಎದುರಿಸುತ್ತಿರುವ ಸೌಮ್ಯಜಿತ್‌ ಘೋಷ್‌ ಅವರಿಗೆ ಸ್ಥಾನ ದೊರೆತಿಲ್ಲ.ಆಗಸ್ಟ್‌ 18ರಿಂದ ಕೂಟವು ಆರಂಭವಾಗಲಿದೆ.

ADVERTISEMENT

ಪುರುಷರ ತಂಡ: ಅಚಂತಾ ಶರತ್‌ ಕಮಲ್‌, ಜ್ಞಾನಶೇಖರನ್‌ ಸತ್ಯನ್‌, ಆ್ಯಂಟನಿ ಅಮಲ್‌ರಾಜ್‌, ಹರ್ಮಿತ್‌ ದೇಸಾಯಿ, ಮಾನವ್‌ ಠಕ್ಕರ್‌.

ಮಹಿಳೆಯರ ತಂಡ: ಮಣಿಕಾ ಬಾತ್ರಾ, ಮೌಮಾ ದಾಸ್‌, ಮಧುರಿಕಾ ಪಾಟ್ಕರ್‌, ಐಹಿಕಾ ಮುಖರ್ಜಿ, ಸುತಿರ್ತಾ ಮುಖರ್ಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.