ADVERTISEMENT

ಉದ್ದೀಪನ ಮದ್ದು ಸೇವನೆ: ಸಿಕ್ಕಿಬಿದ್ದ ತರಂಜೀತ್ ಕೌರ್

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 14:42 IST
Last Updated 1 ಜನವರಿ 2022, 14:42 IST
-
-   

ನವದೆಹಲಿ (ಪಿಟಿಐ): ಭಾರತದ 23 ವರ್ಷದೊಳಗಿನವರ ಅಥ್ಲೆಟಿಕ್ಸ್‌ನಲ್ಲಿ ಅತಿ ವೇಗದ ಓಟಗಾರ್ತಿ ತರಂಜೀತ್ ಕೌರ್ ಉದ್ದೀಪನ ಮದ್ದು ಸೇವಿಸಿರುವುದು ದೃಢಪಟ್ಟಿದೆ.

ದೆಹಲಿಯ 20 ವರ್ಷದ ಅಥ್ಲೀಟ್‌ ತರಂಜೀತ್ ಅವರು ಸೆಪ್ಟೆಂಬರ್‌ನಲ್ಲಿ ನಡೆದಿದ್ದ 23 ವರ್ಷದೊಳಗಿನವರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ 100 ಮೀಟರ್ಸ್ ಮತ್ತು200 ಮೀಟರ್ಸ್ ಓಟಗಳಲ್ಲಿ ಚಿನ್ನದ ಪದಕ ಜಯಿಸಿದ್ದರು. ಈ ಸ್ಪರ್ಧೆಗಳಲ್ಲಿ ಅವರು ಕ್ರಮವಾಗಿ 11.54 ಸೆಕೆಂಡು ಮತ್ತು 23.57 ಸಕೆಂಡುಗಳ ಕಾಲ ತೆಗೆದುಕೊಂಡಿದ್ದರು.

‘ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕವು (ನಾಡಾ) ಸ್ಪರ್ಧೆಯ ಸಂದರ್ಭದಲ್ಲಿ ಮಾಡಿದ ಪರೀಕ್ಷೆಯಲ್ಲಿ ತರಂಜೀತ್ ಉದ್ದೀಪನ ಮದ್ದು ಸೇವಿಸಿರುವ ಖಚಿತವಾಗಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಅವರು ಸೇವಿಸಿರುವ ಮದ್ದು ಮತ್ತು ಪ್ರಮಾಣದ ಕುರಿತು ಯಾವುದೇ ಮಾಹಿತಿಯನ್ನು ನಾಡಾ ಇದುವರೆಗೆ ಬಹಿರಂಗಪಡಿಸಿಲ್ಲ. ರಾಷ್ಟ್ರೀಯ 23 ವರ್ಷದೊಳಗಿನವರ ಅಥವಾ ರಾಷ್ಟ್ರೀಯ ಮುಕ್ತ ಚಾಂಪಿಯನ್‌ಷಿಪ್‌ಗಳಲ್ಲಿ ಅವರು ಈ ಮದ್ದು ಸೇವನೆ ಮಾಡಿದ್ದರು ಎಂದು ಹೇಳಲಾಗಿದೆ.

ನಾಡಾ ಶಿಸ್ತು ಸಮಿತಿಯ ವಿಚಾರಣೆಯ ನಂತರ ಕೌರ್ ತಪ್ಪಿತಸ್ಥರು ಎಂದು ಸಾಬೀತಾಗಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.