ADVERTISEMENT

ಬೀಗಲ್ಸ್‌, ಸದರ್ನ್‌ ಬ್ಲೂಸ್‌ ಚಾಂಪಿಯನ್‌

13 ವರ್ಷದೊಳಗಿನವರ ಬ್ಯಾಸ್ಕೆಟ್‌ಬಾಲ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 16:29 IST
Last Updated 13 ಏಪ್ರಿಲ್ 2025, 16:29 IST
ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್‌ ಆದ ಬೀಗಲ್ಸ್‌ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ತಂಡ. (ನಿಂತವರು) ಎಡದಿಂದ; ಆಧ್ಯಾ, ಅನೈಧ್ಯಾ, ಆಶಿ, ಅದಿತಿ, ಜಿ. ದಿಲೀಪ್ (ಒಲಿಪಿಯನ್), ಮೋಹನ್ ಕುಮಾರ್ (ಮುಖ್ಯ ಕೋಚ್), ಸುಷ್ಮಾ ಗೋಲ್ (ಕೋಚ್) , ಆಕಾಂಕ್ಷಾ, ಓಜಸ್ವಿ. (ಕುಳಿತವರು) ದಿಶ್, ಹಿತಾ, ಯಾಮಿನಿ, ದೇವಾಂಶಿ, ಸೈದಾ ಇರಾ, ಕನಿಷ್ಕಾ
ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್‌ ಆದ ಬೀಗಲ್ಸ್‌ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ತಂಡ. (ನಿಂತವರು) ಎಡದಿಂದ; ಆಧ್ಯಾ, ಅನೈಧ್ಯಾ, ಆಶಿ, ಅದಿತಿ, ಜಿ. ದಿಲೀಪ್ (ಒಲಿಪಿಯನ್), ಮೋಹನ್ ಕುಮಾರ್ (ಮುಖ್ಯ ಕೋಚ್), ಸುಷ್ಮಾ ಗೋಲ್ (ಕೋಚ್) , ಆಕಾಂಕ್ಷಾ, ಓಜಸ್ವಿ. (ಕುಳಿತವರು) ದಿಶ್, ಹಿತಾ, ಯಾಮಿನಿ, ದೇವಾಂಶಿ, ಸೈದಾ ಇರಾ, ಕನಿಷ್ಕಾ   

ಬೆಂಗಳೂರು: ಆತಿಥೇಯ ಬೀಗಲ್ಸ್‌ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ಮತ್ತು ಸದರ್ನ್‌ ಬ್ಲೂಸ್‌ ತಂಡವು ಭಾನುವಾರ ಮುಕ್ತಾಯಗೊಂಡ 13 ವರ್ಷದೊಳಗಿನವರ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕಿಯರ ಮತ್ತು ಬಾಲಕರ ಪ್ರಶಸ್ತಿಯನ್ನು ಗೆದ್ದುಕೊಂಡರು.

ಸಾನ್ವಿ (18) ಮತ್ತು ಆಶಿ (16) ಅವರ ಅಮೋಘ ಆಟದ ಬಲದಿಂದ ಬೀಗಲ್ಸ್‌ ತಂಡವು ಬಾಲಕಿಯರ ಫೈನಲ್‌ನಲ್ಲಿ 57–24ರಿಂದ ಬೆಂಗಳೂರು ಸ್ಪೋರ್ಟಿಂಗ್‌ ತಂಡವನ್ನು ಮಣಿಸಿತು. ಸ್ಪೋರ್ಟಿಂಗ್‌ ಪರ ಅಂಕಿತಾ 10 ಅಂಕ ಗಳಿಸಿದರು. ಉತ್ತಮ ಆಟಗಾರ್ತಿಯಾಗಿ ಸಾನ್ವಿ ಹೊರಹೊಮ್ಮಿದರು.ಮೂರನೇ ಸ್ಥಾನಕ್ಕಾಗಿ ನಡೆದ ಹಣಾಹಣಿಯಲ್ಲಿ ಎಚ್‌ಬಿಆರ್‌ ತಂಡವು 31–26ರಿಂದ ವೈಎನ್‌ಬಿಸಿ ತಂಡವನ್ನು ಸೋಲಿಸಿತು.

ಬಾಲಕರ ಫೈನಲ್‌ನಲ್ಲಿ ಸದರ್ನ್‌ ತಂಡವು 62–38ರಿಂದ ಎಂಎನ್‌ಕೆ ರಾವ್‌ ತಂಡವನ್ನು ಸೋಲಿಸಿತು. ಸದರ್ನ್‌ ಪರ ತ್ರಿನಾಭ್‌ 24, ಶೌರ್ಯ 12 ಅಂಕ ಗಳಿಸಿದರೆ, ಎಂಎನ್‌ಕೆ ಪರ ಅನಿರುದ್ಧ 15 ಪಾಯಿಂಟ್ಸ್‌ ಕಲೆ ಹಾಕಿದರು. ತ್ರಿನಾಭ್‌ ಉತ್ತಮ ಆಟಗಾರ ಗೌರವಕ್ಕೆ ಪಾತ್ರವಾದರು.ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಪಿಪಿಸಿ ತಂಡವು 61–38ರಿಂದ ಭಾರತ್‌ ಸ್ಪೋರ್ಟ್ಸ್‌ ಯೂನಿಯನ್‌ ತಂಡವನ್ನು ಮಣಿಸಿತು.

ADVERTISEMENT
ಬಾಲಕರ ವಿಭಾಗದ ಪ್ರಶಸ್ತಿ ಗೆದ್ದ ಸದರ್ನ್‌ ಬ್ಲೂಸ್‌ ತಂಡ. (ನಿಂತವರು) ಎಡದಿಂದ; ವಿಹಾನ್ ನಾಥನ್ ಶೌರ್ಯ ಕಿರಣ್ (ಸಹಾಯಕ ಕೋಚ್) ಮನೋಜ್ ಕುಮಾರ್ (ಮುಖ್ಯ ಕೋಚ್) ವಿಸ್ಮಯ್ ಶ್ಲೋಕ್ ತ್ರಿನಾಭ್. (ಕುಳಿತವರು) ರೆಯಾನ್ಶ್ ಜಸ್ವಿನ್ ದೇವ್ ಚರಣ್ ಮಯಂಕ್ ಜಯದನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.