ADVERTISEMENT

2032ರ ಒಲಿಂಪಿಕ್ಸ್‌ ವರೆಗೆ ಕುಸ್ತಿಯ ಉಸ್ತುವಾರಿ ವಹಿಸಿಕೊಳ್ಳಲಿದೆ ಉತ್ತರ ಪ್ರದೇಶ

ಪಿಟಿಐ
Published 26 ಆಗಸ್ಟ್ 2021, 13:17 IST
Last Updated 26 ಆಗಸ್ಟ್ 2021, 13:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಲಖನೌ: ಭಾರತೀಯ ಕುಸ್ತಿಗೆ ದೊಡ್ಡಮಟ್ಟದ ಉತ್ತೇಜನ ದೊರಕಿದೆ. 2032ರ ಒಲಿಂಪಿಕ್ಸ್‌ ವರೆಗೆ ಈ ಕ್ರೀಡೆಯನ್ನು ಸಮಗ್ರವಾಗಿ ಪ್ರೋತ್ಸಾಹಿಸುವ ಹೊಣೆಯನ್ನು ಉತ್ತರ ಪ್ರದೇಶ ಸರ್ಕಾರ ವಹಿಸಿಕೊಳ್ಳಲಿದೆ.

ಕುಸ್ತಿಪಟುಗಳಿಗೆ ಬೆಂಬಲ ಮತ್ತು ಮೂಲಸೌಕರ್ಯ ಒದಗಿಸಲು ₹170 ಕೋಟಿ ರೂಪಾಯಿಗಳ ಹೂಡಿಕೆಯನ್ನು ನಿರೀಕ್ಷಿಸಲಾಗಿದೆ ಎಂದು ಭಾರತದ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಪಿಟಿಐಗೆ ತಿಳಿಸಿದ್ದಾರೆ.

ಹಾಕಿಗೆ ಒಡಿಶಾ ಸರ್ಕಾರ ನೀಡಿದ ಪ್ರೋತ್ಸಾಹದಿಂದ ಉತ್ತೇಜನಗೊಂಡಿರುವ ಉತ್ತರ ಪ್ರದೇಶವು ಕುಸ್ತಿಯನ್ನು ಪ್ರೋತ್ಸಾಹಿಸಲು ಮುಂದೆ ಬಂದಿದೆ ಎಂದು ಡಬ್ಲ್ಯುಎಫ್‌ಐನ ಮುಖ್ಯಸ್ಥರೂ ಆದ ಸಿಂಗ್‌ ಹೇಳಿದ್ದಾರೆ.

ADVERTISEMENT

‘ಒಡಿಶಾ ಒಂದು ಸಣ್ಣ ರಾಜ್ಯ. ಆದರೂ ಹಾಕಿಯನ್ನು ಅತ್ಯುತ್ತಮವಾಗಿ ಪ್ರೋತ್ಸಾಹಿಸಿದ್ದಾರೆ. ದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶವೇಕೆ ಕುಸ್ತಿಯನ್ನು ಪ್ರೋತ್ಸಾಹಿಸಲು ಸಾಧ್ಯವಿಲ್ಲ ಎಂದು ನಾವು ಯೋಚಿಸಿದೆವು. ಸಿಎಂ ಯೋಗಿ ಆದಿತ್ಯನಾಥ್ ಅದನ್ನು ಒಪ್ಪಿಕೊಂಡಿದ್ದಾರೆ’ ಎಂದು ಸಿಂಗ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.