ಸಾಂದರ್ಭಿಕ ಚಿತ್ರ
ನವದೆಹಲಿ: ಅಲ್ಟಿಮೇಟ್ ಟೇಬಲ್ ಟೆನಿಸ್ (ಯುಟಿಟಿ), ಮುಂದಿನ ಋತುವಿನಿಂದ ಕೋಲ್ಕತ್ತ ಥಂಡ್‌ಬ್ಲೇಡ್ಸ್ ಎಂಬ ಹೊಸ ತಂಡವನ್ನು ಸೇರ್ಪಡೆಗೊಳಿಸಿದೆ. ಪುಣೇರಿ ಪಲ್ಟನ್ ಟೂರ್ನಿಯಿಂದ ಹೊರನಡೆಯುವುದಾಗಿ ತಿಳಿಸಿದೆ.
ಪುಣೇರಿ ಪಲ್ಟನ್ ನಿರ್ಗಮನದ ಬೆನ್ನಲ್ಲೇ, ಪುನೀತ್ ಬಾಲನ್ ಸಮೂಹವು ತನ್ನ ಒಡೆತನದ ‘ಬೆಂಗಳೂರು ಸ್ಮಾಶರ್ಸ್’ ತಂಡದ ಹೆಸರನ್ನು ‘ಪುಣೆ ಜಾಗ್ವಾರ್ಸ್’ ಎಂದು ಬದಲಾಯಿಸಿದೆ.
ಟೂರ್ನಿಯ ಆರನೇ ಆವೃತ್ತಿಯಲ್ಲೂ ಎಂಟು ತಂಡಗಳು ಇರಲಿವೆ. ಯುಟಿಟಿ ಮುಂದಿನ ಆವೃತ್ತಿಯು ಮೇ 29 ರಿಂದ ಜೂನ್ 15ರವರೆಗೆ ಮೊದಲ ಬಾರಿ ಅಹಮದಾಬಾದಿಲ್ಲಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.