ADVERTISEMENT

ಶೂಟಿಂಗ್‌: ವರ್ಷಾಗೆ ಚಿನ್ನ

ಪಿಟಿಐ
Published 26 ನವೆಂಬರ್ 2018, 20:15 IST
Last Updated 26 ನವೆಂಬರ್ 2018, 20:15 IST

ನವದೆಹಲಿ: ಮಧ್ಯಪ್ರದೇಶದ ವರ್ಷಾ ವರ್ಮನ್‌ ಅವರು 62ನೇ ರಾಷ್ಟ್ರೀಯ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಸೋಮವಾರ ನಡೆದ ಮಹಿಳೆಯರ ಟ್ರ್ಯಾಪ್‌ ವಿಭಾಗದ ಫೈನಲ್‌ನಲ್ಲಿ ವರ್ಷಾ 38 ಸ್ಕೋರ್‌ ಗಳಿಸಿ ಈ ಸಾಧನೆ ಮಾಡಿದರು. ನವದೆಹಲಿಯ ಸೌಮ್ಯ ಗುಪ್ತಾ (37 ಸ್ಕೋರ್‌) ಬೆಳ್ಳಿಯ ಪದಕ ಪಡೆದರು. ಒಎನ್‌ಜಿಸಿಯ ಶಗುಣ್‌ ಚೌಧರಿ (30) ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಶಗುಣ್‌ ಅವರು ಹಿಂದಿನ ಆವೃತ್ತಿಯಲ್ಲಿ ಚಿನ್ನದ ಪದಕ ಜಯಿಸಿದ್ದರು.

ಅರ್ಹತಾ ಸುತ್ತಿನಲ್ಲಿ 114 ಸ್ಕೋರ್‌ ಕಲೆಹಾಕಿದ್ದ ವರ್ಷಾ ಎರಡನೇ ಸ್ಥಾನ ಗಳಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.