ADVERTISEMENT

ಮ್ಯಾಕ್ಸ್‌ಗೆ ಸ್ಪಾನಿಷ್‌ ಗ್ರ್ಯಾನ್‌ಪ್ರೀ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 22 ಮೇ 2022, 15:57 IST
Last Updated 22 ಮೇ 2022, 15:57 IST
ಬಾರ್ಸಿಲೋನಾದಲ್ಲಿ  ನಡೆದ ಸ್ಪಾನಿಷ್ ಫಾರ್ಮುಲಾ ಒನ್ ಗ್ರ್ಯಾನ್‌ಪ್ರೀ ರೇಸ್‌ನಲ್ಲಿ ಪ್ರಶಸ್ತಿ ಗೆದ್ದ ಮ್ಯಾಕ್ಸ್ ವರ್ಸ್‌ಟಾಪನ್  –ಎಎಫ್‌ಪಿ ಚಿತ್ರ
ಬಾರ್ಸಿಲೋನಾದಲ್ಲಿ  ನಡೆದ ಸ್ಪಾನಿಷ್ ಫಾರ್ಮುಲಾ ಒನ್ ಗ್ರ್ಯಾನ್‌ಪ್ರೀ ರೇಸ್‌ನಲ್ಲಿ ಪ್ರಶಸ್ತಿ ಗೆದ್ದ ಮ್ಯಾಕ್ಸ್ ವರ್ಸ್‌ಟಾಪನ್  –ಎಎಫ್‌ಪಿ ಚಿತ್ರ   

ಮಾಂಟ್‌ಮೆಲೊ, ಸ್ಪೇನ್ (ಎಎಫ್‌ಪಿ): ಬೆಲ್ಜಿಯಂ ದೇಶದ ಮ್ಯಾಕ್ಸ್‌ ವರ್ಸ್ಟ್‌ಪನ್ ಭಾನುವಾರ ಇಲ್ಲಿ ನಡೆದ ಸ್ಪಾನಿಷ್ ಗ್ರ್ಯಾನ್ ಪ್ರೀ ಪ್ರಶಸ್ತಿ ಗೆದ್ದರು. ಇದರೊಂದಿಗೆ ಫಾರ್ಮುಲಾ ಒನ್ ಚಾಲಕರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು.

ರೆಡ್‌ ಬುಲ್ ತಂಡದ ಇನ್ನೊಬ್ಬ ಡ್ರೈವರ್ ಸರ್ಗಿಯೊ ಪೆರೆಜ್ ಎರಡನೇ ಸ್ಥಾನ ಪಡೆದರು.

ಈ ರೇಸ್‌ನಲ್ಲಿ ಮ್ಯಾಕ್ಸ್‌ ಪ್ರತಿಸ್ಪರ್ಧಿ ಚಾರ್ಲ್ಸ್‌ ಲೆಕ್ಲರ್ಕ್‌ಗೆ ಅದೃಷ್ಟ ಕೈಕೊಟ್ಟಿತು. 23ನೇ ಲ್ಯಾಪ್‌ನವರೆಗೂ ಮುನ್ನಡೆಯಲ್ಲಿದ್ದ ಲೆಕ್ಲರ್ಕ್ ಅವರ ಫೆರಾರಿಯ ಪವರ್‌ ದಿಢೀರ್ ಕುಂಠಿತಗೊಂಡಿತು. ಈ ಅವಕಾಶವನ್ನು ಬಳಸಿಕೊಂಡ ಮ್ಯಾಕ್ಸ್‌ ಗುರಿಯತ್ತ ನುಗ್ಗಿದರು.

ADVERTISEMENT

ಮ್ಯಾಕ್ಸ್ ಖಾತೆಯಲ್ಲಿ ಈಗ ಒಟ್ಟು 25 ಅಂಕಗಳಿವೆ. ಪೆರೆಜ್ (19), ಮರ್ಸಿಡಿಸ್‌ನ ರಸೆಲ್ (15), ಫೆರಾರಿ ತಂಡದ ಜೂನರ್ ಸೇಂಜ್ (12) ಮತ್ತು ಲೂಯಿಸ್ ಹ್ಯಾಮಿಲ್ಟನ್ (10) ಕ್ರಮವಾಗಿ ಎರಡರಿಂದ ಐದನೇ ಸ್ಥಾನಗಳಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.