ADVERTISEMENT

ಹಿರಿಯ ಅಥ್ಲೆಟಿಕ್‌ ಕೋಚ್‌ ಎನ್‌. ಲಿಂಗಪ್ಪ ನಿಧನ

ಪಿಟಿಐ
Published 18 ಜೂನ್ 2019, 19:06 IST
Last Updated 18 ಜೂನ್ 2019, 19:06 IST
.
.   

ಬೆಂಗಳೂರು: ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಹಿರಿಯ ಅಥ್ಲೆಟಿಕ್‌ ಕೋಚ್‌, ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಎನ್‌.ಲಿಂಗಪ್ಪ(95) ಮಂಗಳವಾರ ಸ್ವಗೃಹದಲ್ಲಿ ನಿಧನರಾದರು. ಈ ಕುರಿತು ಅವರ ಕುಟುಂಬದ ಮೂಲಗಳು ಮಾಹಿತಿ ನೀಡಿವೆ.

2014ರಲ್ಲಿ ಅವರಿಗೆ ದ್ರೋಣಾಚಾರ್ಯ ಪುರಸ್ಕಾರ ಸಂದಿದೆ. ಅಶ್ವಿನಿ ನಾಚಪ್ಪ, ವಂದನಾ ರಾವ್‌, ಡಿ. ವೈ. ಬಿರಾದಾರ್‌, ಉದಯ ಪ್ರಭು, ಪಿ.ಸಿ.ಪೊನ್ನಪ್ಪ ಸೇರಿದಂತೆ ಹಲವು ಅಥ್ಲೀಟ್‌ಗಳಿಗೆ ತರಬೇತಿ ನೀಡಿದ ಹಿರಿಮೆ ಲಿಂಗಪ್ಪ ಅವರದು. ಆರಂಭದಲ್ಲಿ 10 ಕಿ.ಮೀ. ನಡಿಗೆ ಸ್ಪರ್ಧಿ ಆಗಿದ್ದ ಅವರು 1954ರಲ್ಲಿ ಮನಿಲಾದಲ್ಲಿ ನಡೆದ ಏಷ್ಯನ್‌ ಗೇಮ್ಸ್‌ ಟೂರ್ನಿಗೆ ಆಯ್ಕೆಯಾಗಿದ್ದರು.

ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ 10 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಅವರು ಬೆಳ್ಳಿ ಪದಕ ಜಯಿಸಿದ್ದರು. ಭಾರತದ ಅಥ್ಲೆಟಿಕ್ಸ್ ತಂಡಕ್ಕೆ ಸಹಾಯಕ ಕೋಚ್‌ ಆಗಿಯೂ ಅವರು ಕಾರ್ಯನಿರ್ವಹಿಸಿದ್ದರು. ರಾಜ್ಯೋತ್ಸವ ಸೇರಿದಂತೆ ಹಲವು ಗೌರವಗಳಿಗೆ ಅವರು ಭಾಜನರಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.