ADVERTISEMENT

ವಿಜಯ್ ಅಮೃತರಾಜ್‌ ಪದ್ಮಭೂಷಣ, ರೋಹಿತ್ ಶರ್ಮಾ ಪದ್ಮಶ್ರೀ

ಪಿಟಿಐ
Published 25 ಜನವರಿ 2026, 17:53 IST
Last Updated 25 ಜನವರಿ 2026, 17:53 IST
ವಿಜಯ್ ಅಮೃತರಾಜ್ 
ವಿಜಯ್ ಅಮೃತರಾಜ್    

ನವದೆಹಲಿ: ಟೆನಿಸ್ ಕ್ರೀಡೆಯ ದಿಗ್ಗಜ ವಿಜಯ್ ಅಮೃತರಾಜ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ. ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. 

ಭಾನುವಾರ ಕೇಂದ್ರ ಸರ್ಕಾರವು ಪದ್ಮ ಪುರಸ್ಕಾರಗಳ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ  ವಿಜಯ್ ಅವರು ಪದ್ಮಭೂಷಣಕ್ಕೆ ಭಾಜನರಾದ ಏಕೈಕ ಕ್ರೀಡಾ‍ಪಟುವಾಗಿದ್ದಾರೆ. 1983ರಲ್ಲಿ ಅವರಿಗೆ ಪದ್ಮಶ್ರೀ ಮತ್ತು 1974ರಲ್ಲಿ ಅರ್ಜುನ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. 

2024ರ ಟಿ20 ವಿಶ್ವಕಪ್ ವಿಜೇತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಹೋದ ವರ್ಷ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಜಯಿಸಿದ್ದ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ಪ್ಯಾರಾಲಿಂಪಿಕ್ಸ್ ಚಿನ್ನದ ಪದಕವಿಜೇತ ಹೈಜಂಪ್ ಅಥ್ಲೀಟ್ ಪ್ರವೀಣಕುಮಾರ್, ಭಾರತ ಮಹಿಳಾ ಹಾಕಿ ತಂಡದ ಗೋಲ್‌ಕೀಪರ್ ಸವಿತಾ ಪೂನಿಯಾ, ಅನುಭವಿ ಕೋಚ್ ಬಲದೇವ ಸಿಂಗ್ ಮತ್ತು ಕೆ. ಪಜಾನಿವೆಲ್ ಅವರಿಗೆ ಪದ್ಮಶ್ರೀ ನೀಡಲಾಗಿದೆ. ಕುಸ್ತಿ ತಂಡದ ಮಾಜಿ ಕೋಚ್ ವ್ಲಾಡಿಮೆರ್ ಮೆಸ್ಟವಿರಿಶವಿಲಿ ಅವರಿಗೆ ಮರಣೋತ್ತರ ಪದ್ಮಶ್ರೀ ನೀಡಲಾಗಿದೆ. ವ್ಲಾಡಿಮೆರ್ ಅವರು ಒಲಿಂಪಿಯನ್ ಯೋಗೇಶ್ವರ್ ದತ್ ಮತ್ತು ಬಜರಂಗ್ ಪೂನಿಯಾ ಅವರ ಕೋಚ್ ಆಗಿದ್ದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.