ADVERTISEMENT

ಎಬಿಸಿಒ ಸದಸ್ಯರಾಗಿ ವಿಜೇಂದರ್‌ ಸಿಂಗ್

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 14:05 IST
Last Updated 17 ಜನವರಿ 2026, 14:05 IST
ವಿಜೇಂದರ್‌ ಸಿಂಗ್
ವಿಜೇಂದರ್‌ ಸಿಂಗ್   

ನವದೆಹಲಿ: ಒಲಿಂಪಿಕ್ಸ್‌ ಪದಕ ವಿಜೇತ ಬಾಕ್ಸರ್‌ ವಿಜೇಂದರ್‌ ಸಿಂಗ್ ಅವರು ಏಷ್ಯಾ ಬಾಕ್ಸಿಂಗ್‌ ಕೌನ್ಸಿಲ್‌ನ (ಎಬಿಸಿಒ) ಸದಸ್ಯರಾಗಿ ಶನಿವಾರ ನೇಮಕಗೊಂಡಿದ್ದಾರೆ. 

‘ಈ ನೇಮಕವನ್ನು ಗೌರವವೆಂದೇ ಭಾವಿಸುವೆ. ನನ್ನ ಮೇಲೆ ನಂಬಿಕೆಯಿಟ್ಟು ಈ ಜವಾಬ್ದಾರಿಯನ್ನು ವಹಿಸಿದ ಭಾರತ ಬಾಕ್ಸಿಂಗ್ ಫೆಡರೇಷನ್‌ಗೆ ಧನ್ಯವಾದಗಳು. ಏಷ್ಯಾದಲ್ಲಿ ಬಾಕ್ಸಿಂಗ್‌ ಕ್ರೀಡೆಯ ಬೆಳವಣಿಗೆ ಹಾಗೂ ಭಾರತದ ಬಾಕ್ಸರ್‌ಗಳ ಯಶಸ್ಸಿಗೆ ಶ್ರಮಿಸುವೆ’ ಎಂದು ವಿಜೇಂದರ್‌ ಪ್ರತಿಕ್ರಿಯಿಸಿದ್ದಾರೆ.

ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಮೊದಲ ಒಲಿಂಪಿಕ್ಸ್‌ ಪದಕ ಗೆದ್ದುಕೊಟ್ಟ ಹಿರಿಮೆ ವಿಜೇಂದರ್‌ ಅವರದ್ದು. 40 ವರ್ಷ ವಯಸ್ಸಿನ ಅವರು ಬಾಕ್ಸಿಂಗ್‌ನಲ್ಲಿ ಎರಡು ದಶಕಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.