ADVERTISEMENT

ಬಾಕ್ಸಿಂಗ್‌: ವಿಕಾಸ್‌ಗೆ ವಿಜಯ

ಪಿಟಿಐ
Published 21 ಏಪ್ರಿಲ್ 2019, 20:00 IST
Last Updated 21 ಏಪ್ರಿಲ್ 2019, 20:00 IST
ವಿಕಾಸ್‌ ಕೃಷ್ಣಾ
ವಿಕಾಸ್‌ ಕೃಷ್ಣಾ   

ನ್ಯೂಯಾರ್ಕ್‌: ಭಾರತದ ವಿಕಾಸ್‌ ಕೃಷ್ಣಾ, ವೃತ್ತಿಪರ ಬಾಕ್ಸಿಂಗ್ ಪಂದ್ಯದಲ್ಲಿ ಗೆದ್ದಿದ್ದಾರೆ.

ಮ್ಯಾಡಿಸನ್‌ ಸ್ಕ್ವೇರ್‌ ಗಾರ್ಡನ್‌ನಲ್ಲಿ ನಡೆದ ಆರು ಸುತ್ತುಗಳ ಸೂಪರ್‌ ವೆಲ್ಟರ್‌ವೇಟ್‌ ಪಂದ್ಯದಲ್ಲಿ ವಿಕಾಸ್‌ ಅವರು ಅಮೆರಿಕದ ನೋಹ್‌ ಕಿಡ್‌ ಅವರನ್ನು ಪರಾಭವಗೊಳಿಸಿದರು.

ಟೊರೊಂಟೊದಲ್ಲಿ ಜರುಗಿದ ಡಬ್ಲ್ಯುಬಿಸಿ ಏಷ್ಯಾ ವೆಲ್ಟರ್‌ವೇಟ್‌ ಸ್ಪರ್ಧೆಯಲ್ಲಿ ನೀರಜ್‌ ಗೋಯತ್‌ ಗೆದ್ದರು.

ADVERTISEMENT

ಡ್ಯಾನ್‌ಫೋರ್ತ್‌ ಮ್ಯೂಸಿಕ್‌ ಹಾಲ್‌ನಲ್ಲಿ ನಿಗದಿಯಾಗಿದ್ದ ಆರು ಸುತ್ತುಗಳ ಹಣಾಹಣಿಯಲ್ಲಿ ನೀರಜ್‌, ಮೆಕ್ಸಿಕೊದ ಕಾರ್ಲೊಸ್‌ ಲೊಪೆಜ್ ಮರ್ಮೊಲೆಜೊ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.