ADVERTISEMENT

ಬ್ಯಾಸ್ಕೆಟ್‌ಬಾಲ್‌: ವಿಮಾನಪುರ ತಂಡ ಸೆಮಿಗೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2023, 18:13 IST
Last Updated 29 ಜೂನ್ 2023, 18:13 IST
ಬ್ಯಾಸ್ಕೆಟ್‌ಬಾಲ್‌
ಬ್ಯಾಸ್ಕೆಟ್‌ಬಾಲ್‌   

ಬೆಂಗಳೂರು: ರೋಹನ್‌ (24 ಪಾಯಿಂಟ್ಸ್‌), ಪೊನ್ನಪ್ಪ (21 ಪಾಯಿಂಟ್ಸ್‌) ಅವರ ಆಟದ ನೆರವಿನಿಂದ ವಿಮಾನಪುರ ಸ್ಪೋರ್ಟ್ಸ್‌ ಕ್ಲಬ್ ತಂಡವು ಎಂ.ಸಿ. ಶ್ರೀನಿವಾಸ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ‘ಬಿ’ ಡಿವಿಷನ್‌ ಬ್ಯಾಸ್ಕೆಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ದೇವಾಂಗ ಯೂನಿಯನ್‌ ತಂಡವನ್ನು 94–71ರಿಂದ ಗುರುವಾರ ಮಣಿಸಿ ಸೆಮಿಫೈನಲ್‌ ಪ್ರವೇಶಿಸಿತು.

ಮತ್ತೊಂದು ಪಂದ್ಯದಲ್ಲಿ ಕೋರಮಂಗಲ ಸ್ಪೋರ್ಟ್ಸ್‌ ಕ್ಲಬ್‌ ತಂಡವು ರಾಜ್‌ಮಹಲ್‌ ತಂಡವನ್ನು 86–71ರಿಂದ ಸೋಲಿಸಿತು. ಪಂದ್ಯದ ಮಧ್ಯಂತರದ ವೇಳೆಗೆ 31–32ರಿಂದ ಹಿಂದಿದ್ದ ಕೋರಮಂಗಲ ತಂಡವು ನಂತರ ಪುಟಿದೆದ್ದು, ಶಿವರಾಮ್‌ (28 ಪಾಯಿಂಟ್ಸ್‌), ಮಂಜು (21 ಪಾಯಿಂಟ್ಸ್‌) ಅವರ ಆಟದ ಬಲದಿಂದ ಗೆಲುವು ಸಾಧಿಸಿದರು.

ಸೆಮಿಫೈನಲ್‌ನಲ್ಲಿ ವಿಮಾನಪುರ ಸ್ಪೋರ್ಟ್‌ ಕ್ಲಬ್‌ ಮತ್ತು ಜೆಎಸ್‌ಸಿ ತಂಡ ಹಾಗೂ ವಿವೇಕ್ಸ್‌ ಸ್ಪೋರ್ಟ್ಸ್‌ ಕ್ಲಬ್‌ ಮತ್ತು ಕೆಎಸ್‌ಪಿ ತಂಡ ಮುಖಾಮುಖಿಯಾಗಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.