ADVERTISEMENT

ರಾಜ್ಯಮಟ್ಟದ 25ನೇ ವಾಲಿಬಾಲ್‌ ಚಾಂಪಿಯನ್‌ಷಿಪ್‌: ಧಾರವಾಡಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 21:46 IST
Last Updated 27 ಜನವರಿ 2023, 21:46 IST
ರಾಜ್ಯಮಟ್ಟದ 25ನೇ ವಾಲಿಬಾಲ್‌ ಚಾಂಪಿಯನ್‌ಷಿಪ್‌ನ ಶುಕ್ರವಾರದ ‍ಪಂದ್ಯದಲ್ಲಿ ಧಾರವಾಡ ಹಾಗೂ ಬೆಂಗಳೂರು ಕೇಂದ್ರ ತಂಡದ ಪೈಪೋಟಿ –ಪ್ರಜಾವಾಣಿ ಚಿತ್ರ/ ಅನೂಪ್‌ ರಾಘ ಟಿ.
ರಾಜ್ಯಮಟ್ಟದ 25ನೇ ವಾಲಿಬಾಲ್‌ ಚಾಂಪಿಯನ್‌ಷಿಪ್‌ನ ಶುಕ್ರವಾರದ ‍ಪಂದ್ಯದಲ್ಲಿ ಧಾರವಾಡ ಹಾಗೂ ಬೆಂಗಳೂರು ಕೇಂದ್ರ ತಂಡದ ಪೈಪೋಟಿ –ಪ್ರಜಾವಾಣಿ ಚಿತ್ರ/ ಅನೂಪ್‌ ರಾಘ ಟಿ.   

ಮೈಸೂರು: ದೀಪಾ ಅವರ ಉತ್ತಮ ಆಟದ ನೆರವಿನಿಂದ ಧಾರವಾಡ ತಂಡದವರು ರಾಜ್ಯ ಮಟ್ಟದ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರು ಕೇಂದ್ರ ತಂಡದ ವಿರುದ್ಧ ಗೆದ್ದರು.

ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ನಡೆದ ಮಹಿಳೆಯರ ವಿಭಾಗದ ಪಂದ್ಯದಲ್ಲಿ 25–6, 25–11ರಿಂದ ಎದುರಾಳಿ ತಂಡದವರನ್ನು ಮಣಿಸಿದರು.

45 ನಿಮಿಷಗಳ ಹಣಾಹಣಿಯಲ್ಲಿ ದೀಪಾ ಅವರು ಆಕರ್ಷಕ ಬ್ಲಾಕಿಂಗ್‌, ಸ್ಪೈಕಿಂಗ್‌ ಹಾಗೂ ಪಾಸಿಂಗ್‌ ಮೂಲಕ ಧಾರವಾಡಕ್ಕೆ ಅಂಕ ಹೆಚ್ಚಿಸಿಕೊಟ್ಟರು. ಬೆಂಗಳೂರಿನ ನೇಹಾ ಮ್ಯಾಥ್ಯೂ ಆಟವೂ ಎಲ್ಲರ ಗಮನಸೆಳೆಯಿತು.

ADVERTISEMENT

ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಮೈಸೂರು 25–3, 25–9ರಿಂದ ಕೊಪ್ಪಳದ ಎದುರು, ಶಿವಮೊಗ್ಗ 25–4, 21–25, 15–7ರಿಂದ ವಿಜಯನಗರದ ಎದುರು, ಗದಗ 14–20, 25–16ರಿಂದ ಹಾಸನದ ಎದುರು, ಹಾವೇರಿ 25–17, 25–8ರಿಂದ ರಾಯಚೂರು ಎದುರು ಜಯ ಸಾಧಿಸಿದವು.

ಜಯ ಸಾಧಿಸಿದ ತಂಡಗಳು: ಪುರುಷರ ವಿಭಾಗ: ತುಮಕೂರು, ದಾವಣಗೆರೆ, ಬೆಂಗಳೂರು ಕೇಂದ್ರ, ರಾಮನಗರ, ಕೊಡಗು, ಚಿಕ್ಕೋಡಿ, ಕೋಲಾರ, ಬಳ್ಳಾರಿ, ವಿಜಯನಗರ, ಬೆಂಗಳೂರು ಗ್ರಾಮಾಂತರ, ಹಾವೇರಿ, ಕೋಲಾರ, ಶಿವಮೊಗ್ಗ, ಹಾಸನ, ಬೆಂಗಳೂರು ಉತ್ತರ, ಕೊಪ್ಪಳ, ಚಾಮರಾಜನಗರ, ಮೈಸೂರು, ಉತ್ತರ ಕನ್ನಡ, ಚಿಕ್ಕಮಗಳೂರು.

ಮಹಿಳೆಯರ ವಿಭಾಗ: ಗದಗ, ಶಿವಮೊಗ್ಗ, ಹಾಸನ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಹಾವೇರಿ, ಧಾರವಾಡ, ಮೈಸೂರು, ಕೊಪ್ಪಳ, ಬೆಳಗಾವಿ, ಮಂಡ್ಯ, ಚಾಮರಾಜನಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.