ADVERTISEMENT

ಬಾರ್ಸಿಲೋನಾ ತೊರೆದು ಪಿಎಸ್‌ಜಿ ಕ್ಲಬ್ ಸೇರಿದ ಮೆಸ್ಸಿಗೆ ಭರ್ಜರಿ ಸ್ವಾಗತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಆಗಸ್ಟ್ 2021, 7:35 IST
Last Updated 12 ಆಗಸ್ಟ್ 2021, 7:35 IST
ಲಯೊನೆಲ್ ಮೆಸ್ಸಿ, ಚಿತ್ರ ಕೃಪೆ: @PSG_English, Twitter
ಲಯೊನೆಲ್ ಮೆಸ್ಸಿ, ಚಿತ್ರ ಕೃಪೆ: @PSG_English, Twitter    

ಪ್ಯಾರಿಸ್: ಒಲ್ಲದ ಮನಸ್ಸಿನಿಂದ ಬಾರ್ಸಿಲೋನಾ ಎಫ್‌ಸಿ ತೊರೆದು ಪ್ಯಾರಿಸ್ ಸೈಂಟ್ ಜರ್ಮೈನ್ (ಪಿಎಸ್‌ಜಿ) ಕ್ಲಬ್ ಸೇರಿರುವ ಅರ್ಜೆಂಟೀನಾದ ಹಿರಿಯ ಫುಟ್‌ಬಾಲ್ ಆಟಗಾರ ಲಯೊನೆಲ್ ಮೆಸ್ಸಿ ಅವರಿಗೆ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದ್ದಾರೆ.

ಇದೇ ಸಂದರ್ಭದಲ್ಲಿ 30 ನಂಬರ್ ಜೆರ್ಸಿಯನ್ನು ಲಯೊನೆಲ್ ಮೆಸ್ಸಿ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.

ಬ್ರೆಜಿಲ್‌ನ ಸ್ಟಾರ್ ಆಟಗಾರ ನೇಮರ್ ಮುಂತಾದ ಆಟಗಾರರೊಂದಿಗೆ ಮೆಸ್ಸಿ ಕಣಕ್ಕಿಳಿಯಲಿದ್ದಾರೆ. ಇದು ಕೂಡಾ ಫುಟ್‌ಬಾಲ್ ಪ್ರೇಮಿಗಳ ಸಂತಸವನ್ನು ಇಮ್ಮಡಿಗೊಳಿಸಿದೆ.

ಈ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಮೆಸ್ಸಿ, ಚಾಂಪಿಯನ್ಸ್ ಲೀಗ್ ಗೆಲ್ಲುವುದೇ ಮೊದಲ ಗುರಿ. ಅದಕ್ಕಾಗಿಯೇ ನಾನಿಲ್ಲಿದ್ದೇನೆ ಎಂದಿದ್ದಾರೆ.

ಮಗದೊಂದು ಚಾಂಪಿಯನ್ಸ್ ಲೀಗ್ ಗೆಲ್ಲುವುದು ನನ್ನ ಕನಸಾಗಿದೆ. ಅತ್ಯುತ್ತಮ ತಂಡವನ್ನು ನಾವು ಹೊಂದಿದ್ದೇವೆ ಎಂದಿದ್ದಾರೆ.

34 ವರ್ಷದ ಮೆಸ್ಸಿ, ಕಳೆದ 21 ವರ್ಷಗಳಿಂದ ಬಾರ್ಸಿಲೋನಾ ತಂಡದ ಭಾಗವಾಗಿದ್ದರು. ಅಲ್ಲದೆ ದಾಖಲೆಯ 682 ಗೋಲುಗಳನ್ನು ಗಳಿಸಿದ್ದರು. ಆದರೆ ಈಗ ಅನಿವಾರ್ಯವಾಗಿ ಬಾರ್ಸಿಲೋನಾ ತಂಡವನ್ನು ತೊರೆದು ಪಿಎಸ್‌ಜಿ ತಂಡವನ್ನು ಸೇರ್ಪಡೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.