ADVERTISEMENT

ಐಡಬ್ಲ್ಯುಎಫ್‌ನಿಂದ ಪರಿಹಾರ ಕೋರಲಿರುವ ಸಂಜಿತಾ

ಪಿಟಿಐ
Published 5 ಜೂನ್ 2020, 19:45 IST
Last Updated 5 ಜೂನ್ 2020, 19:45 IST
ಸಂಜಿತಾ ಚಾನು –ಎಎಫ್‌ಪಿ ಚಿತ್ರ
ಸಂಜಿತಾ ಚಾನು –ಎಎಫ್‌ಪಿ ಚಿತ್ರ   

ನವದೆಹಲಿ: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಎರಡು ಬಾರಿ ಚಿನ್ನದ ಪದಕ ಗಳಿಸಿರುವ ವೇಟ್‌ಲಿಫ್ಟರ್, ಭಾರತದ ಸಂಜಿತಾ ಚಾನು ಅವರು ಉದ್ದೀಪನ ಮದ್ದು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಅಂತರರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಫೆಡರೇಷನ್‌ನಿಂದ (ಐಡಬ್ಲ್ಯುಎಫ್) ಪರಿಹಾರ ಕೋರಲುಸಜ್ಜಾಗಿದ್ದಾರೆ.

ಇನ್ನೂ ತೀರ್ಪು ಬಾರದ ಪ್ರಕರಣದಿಂದ ತಮಗಾಗಿರುವ ಮಾನಸಿಕ ವೇದನೆಗೆಐಡಬ್ಲ್ಯುಎಫ್ ಬೆಲೆ ತೆರಬೇಕು ಎಂಬುದು ಅವರ ಬೇಡಿಕೆ. 2017ರಲ್ಲಿ ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾದ ನಂತರ ಚಾನು ಪ್ರಕರಣ ಅನೇಕ ಏಳು–ಬೀಳುಗಳನ್ನು ಕಂಡಿದೆ.

‘ಅನೇಕ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲುಅವಕಾಶ ನೀಡಿದ್ದರಿಂದ ಪ್ರಕರಣವನ್ನುಐಡಬ್ಲ್ಯುಎಫ್ ಕೈಬಿಟ್ಟಿದೆ ಎಂದುಕೊಂಡಿದ್ದೆವು. ಆದರೆ ಇತ್ತೀಚೆಗೆ ಅರ್ಜುನ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಪ್ರಕರಣದ ತೀರ್ಪು ಇನ್ನೂ ಬಂದಿಲ್ಲ ಎಂದು ಭಾರತ ವೇಟ್‌ಲಿಫ್ಟಿಂಗ್ ಫೆಡರೇಷನ್ ತಿಳಿಸಿದಾಗ ದಿಗ್ಭ್ರಮೆಯಾಯಿತು’ ಎಂದು ಚಾನು ಅವರ ಸಹೋದರ ಮತ್ತು ವಿಚಾರಣೆ ಸಂದರ್ಭದಲ್ಲಿ ಸಾಕ್ಷಿಯಾಗಿದ್ದ ಬಿಜೇನ್ ಕುಮಾರ್ ಖುಮುಕ್ಚಮ್ ಹೇಳಿದರು.

ADVERTISEMENT

‘ಪರಿಹಾರ ಕೋರುವ ಯೋಚನೆ ಇರಲಿಲ್ಲ. ಆದರೆ ಈಗ ಹಾಗೆ ಮಾಡಬೇಕು ಎಂದೆನಿಸುತ್ತದೆ. ಹಣಕ್ಕಾಗಿ ಪರಿಹಾರ ಇದನ್ನು ಮಾಡುತ್ತಿಲ್ಲ. ಆಕೆ ಅನುಭವಿಸಿದ ಮಾನಸಿಕ ನೋವು ಅಷ್ಟಿಷ್ಟಲ್ಲ’ ಎಂದು ಅವರು ಹೇಳಿದರು.

2018ರ ಮೇ 15ರಿಂದ 2019ರ ಜನವರಿ 22ರ ವರೆಗೆ ಚಾನು ಅವರನ್ನು ಅಮಾನತುಗೊಳಿಸಲಾಗಿತ್ತು. ನಂತರ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ ಇನ್ನೂ ಅಧಿಕೃತವಾಗಿ ಪ್ರಕರಣದಿಂದ ಮುಕ್ತವಾಗಿಲ್ಲ.2014 ಮತ್ತು 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಾನುಚಿನ್ನ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.