ADVERTISEMENT

ಮಹಿಳಾ ಹಾಕಿ: ಭಾರತಕ್ಕೆ ಸೋಲು

ಪಿಟಿಐ
Published 29 ಜನವರಿ 2020, 18:29 IST
Last Updated 29 ಜನವರಿ 2020, 18:29 IST

ಆಕ್ಲೆಂಡ್‌ : ಭಾರತ ಮಹಿಳಾ ಹಾಕಿ ತಂಡ, ನ್ಯೂಜಿಲೆಂಡ್‌ ಪ್ರವಾಸದ ಮೂರನೇ ಪಂದ್ಯದಲ್ಲಿ ಬುಧವಾರ ಆತಿಥೇಯ ತಂಡದ ಎದುರು 0–1 ಗೋಲಿನಿಂದ ಸೋಲನುಭವಿಸಿತು.

ಹೋಪ್‌ ರಾಲ್ಫ್‌ 37ನೇ ನಿಮಿಷ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡದ ನಿರ್ಣಾಯಕ ಗೋಲನ್ನು ಗಳಿಸಿದರು.

ಪಂದ್ಯದ ಎರಡನೇ ಕ್ವಾರ್ಟರ್‌ನಲ್ಲಿ ಭಾರತದ ಆಟಗಾರ್ತಿಯರಿಗೆ ಪೆನಾಲ್ಟಿ ಕಾರ್ನರ್‌ ಅವಕಾಶಗಳು ಲಭಿಸಿದರೂ ಗೋಲು ದಾಖಲಾಗಲಿಲ್ಲ.

ADVERTISEMENT

ಭಾರತ ಪ್ರವಾಸದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ ಡೆವಲಪ್‌ಮೆಂಟ್‌ ತಂಡದ ಎದುರು 4–0 ಗೋಲುಗಳಿಂದ ಜಯಗಳಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡದೆದುರು 1–2 ಗೋಲುಗಳ ಅಂತರದಲ್ಲಿ ಸೋಲನುಭವಿಸಿತ್ತು.

ಭಾರತ ಫೆಬ್ರುವರಿ 4ರಂದು ನಡೆಯುವ ಪಂದ್ಯದಲ್ಲಿ ಬ್ರಿಟನ್‌ ತಂಡವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.