ADVERTISEMENT

ಮಹಿಳಾ ಬ್ಯಾಸ್ಕೆಟ್‌ಬಾಲ್ ತಂಡ ಪ್ರಕಟ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 19:41 IST
Last Updated 11 ನವೆಂಬರ್ 2019, 19:41 IST

ಬೆಂಗಳೂರು: ಏಷ್ಯಾ ಒಸೀನಿಯಾ ವಲಯದ ಫಿಬಾ ಮಹಿಳಾ ಒಲಿಂಪಿಕ್‌ ಪ್ರೀ ಕ್ವಾಲಿಫೈಯಿಂಗ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿಗೆ ಸೋಮವಾರ ಭಾರತ ಮಹಿಳಾ ತಂಡವನ್ನು ಪ್ರಕಟಿಸಲಾಗಿದೆ.

ಟೂರ್ನಿಯು ಇದೇ ತಿಂಗಳ 14ರಿಂದ 17ರವರೆಗೆ ಮಲೇಷ್ಯಾದ ಕ್ವಾಲಾಲಂಪುರದಲ್ಲಿ ನಡೆಯಲಿದೆ.

ಭಾರತ ತಂಡವು ಟೂರ್ನಿಯಲ್ಲಿ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಜಪಾನ್‌, ಆಸ್ಟ್ರೇಲಿಯಾ ಮತ್ತು ಚೀನಾ ತೈಪೆ ತಂಡಗಳೂ ಇದೇ ಗುಂಪಿನಲ್ಲಿವೆ.

ADVERTISEMENT

ತಂಡ ಇಂತಿದೆ: ಪಿ.ಯು.ನವನೀತಾ, ಶ್ರುತಿ ಅರವಿಂದ್‌, ಮಧು ಕುಮಾರಿ, ಎಸ್‌.ಸತಿಯಾ, ಪಿ.ಎಸ್‌. ಜೀನಾ (ನಾಯಕಿ), ಪಿ.ಜಿ.ಅಂಜನಾ, ಅನೀಶಾ, ಶ್ರೀವಿದ್ಯಾ, ಸ್ಟೆಫಿ ನಿಕ್ಸನ್‌, ನೀಮಾ ಡೊಮಾ ಭುಟಿಯಾ, ಬರ್ಖಾ ಸೊಂಕಾರ, ಶಿರೀನ್‌. ಮುಖ್ಯ ಕೋಚ್‌: ಜೊರಾನ್‌ ವಿಸಿಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.