ಓಟ
ಪ್ಯಾರಿಸ್: ಪ್ರಮುಖ ಕೂಟಗಳಲ್ಲಿ ಮಹಿಳೆಯರ ವಿಭಾಗದಲ್ಲಿ ಭಾಗವಹಿಸುವ ಬಯಸುವ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟುಗಳು ಸೆಪ್ಟೆಂಬರ್‌ನಿಂದ ಅನ್ವಯವಾಗುವಂತೆ ‘ವಂಶವಾಹಿ ಪರೀಕ್ಷೆ’ಗೆ ಒಳಗಾಗಬೇಕಾಗುತ್ತದೆ ಎಂದು ವಿಶ್ವ ಅಥ್ಲೆಟಿಕ್ಸ್ ಘೋಷಿಸಿದೆ.
ಸೆಪ್ಟೆಂಬರ್ 13 ರಿಂದ 21ರವರೆಗೆ ಟೋಕಿಯೊದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್ ವೇಳೆಯಿಂದ ಈ ಪರೀಕ್ಷೆ ಅನ್ವಯಿಸಲಾಗುವುದು.
ಮಹಿಳಾ ಅಥ್ಲೀಟ್‌ಗಳ ವಿಭಾಗದಲ್ಲಿ ಅರ್ಹತಾ ನಿಯಮಗಳನ್ನು ಬಿಗಿಗೊಳಿಸುವ ಉದ್ದೇಶದಿಂದ ಈ ಪರೀಕ್ಷೆ ನಡೆಸಲು ವಿಶ್ವ ಅಥ್ಲೆಟಿಕ್ಸ್ ಮುಂದಾಗಿದೆ ಎಂದು ಅಧ್ಯಕ್ಷ ಸೆಬಾಸ್ಟಿಯನ್ ಕೊ ತಿಳಿಸಿದ್ದಾರೆ.
‘ಸ್ವಾಬ್ ಪರೀಕ್ಷೆ’ ಅಥವಾ ರಕ್ತ ಪರೀಕ್ಷೆಯ ಮೂಲಕ ಇದನ್ನು ಪತ್ತೆ ಮಾಡಲಾಗುವುದು.
ಲಿಂಗತ್ವ ಅಲ್ಪಸಂಖ್ಯಾತರು ಮಹಿಳಾ ವಿಭಾಗದಲ್ಲಿ ಭಾಗವಹಿಸುವುದನ್ನು ವಿಶ್ವ ಅಥ್ಲೆಟಿಕ್ಸ್ ಎರಡು ವರ್ಷಗಳ ಹಿಂದೆಯೇ ನಿರ್ಬಂಧಿಸಿತ್ತು. ಟೆಸ್ಟೊಸ್ಟರೋನ್ ಹಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಮಹಿಳಾ ಅಥ್ಲೀಟುಗಳು ಅರ್ಹತೆ ಗಿಟ್ಟಿಸಿಕೊಳ್ಳಬೇಕಾದರೆ ಅದನ್ನು ತಗ್ಗಿಸುವುದು ಅಗತ್ಯ ಎಂದು ಕೂಡ ವಿಶ್ವ ಅಥ್ಲೆಟಿಕ್ಸ್ ಹೇಳುತ್ತಾ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.