
ಪ್ರಜಾವಾಣಿ ವಾರ್ತೆ
ರವೀಂದ್ರ ಶೆಟ್ಟಿ
ಬೆಂಗಳೂರು: 2026ರ ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ನಡೆಯಲಿರುವ ವಿಶ್ವ ಸೂಪರ್ ಕಬಡ್ಡಿ ಲೀಗ್ ಉದ್ಘಾಟನಾ ಆವೃತ್ತಿಯ ಟೂರ್ನಿಯ ತಾಂತ್ರಿಕ ನಿರ್ದೇಶಕರಾಗಿ ಅಂತರರಾಷ್ಟ್ರೀಯ ತರಬೇತುರಾದ ರವೀಂದ್ರ ಶೆಟ್ಟಿ ಅವರನ್ನು ನೇಮಿಸಲಾಗಿದೆ.
ಕರ್ನಾಟಕದ ರವೀಂದ್ರ ಅವರು ಕರ್ನಾಟಕ ರಾಜ್ಯ ತಂಡದ ಮುಖ್ಯ ಕೋಚ್ (2001–19) ಆಗಿ ಸೇವೆ ಸಲ್ಲಿಸಿದ್ದಾರೆ. ಜೂನಿಯರ್ ಕಬಡ್ಡಿ ವಿಶ್ವಕಪ್‌ನಲ್ಲಿ (ಇರಾನ್, 2023) ಭಾರತದ ಜೂನಿಯರ್ ತಂಡಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಪ್ರೊ ಕಬಡ್ಡಿ ಲೀಗ್‌ನಲ್ಲೂ ಹಲವು ತಂಡಗಳಿಗೆ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ರವೀಂದ್ರ ಅವರು ಲೀಗ್‌ನ ತಾಂತ್ರಿಕ ಮತ್ತು ಸ್ಪರ್ಧಾತ್ಮಕ ಚೌಕಟ್ಟನ್ನು ಮುನ್ನಡೆಸಲಿದ್ದಾರೆ. ಆಟದ ರಚನೆ, ರೆಫರಿ, ತರಬೇತುದಾರರ ಅಭಿವೃದ್ಧಿ ಮತ್ತು ಪಂದ್ಯಗಳ ಸ್ವರೂಪಗಳಲ್ಲಿನ ನಾವೀನ್ಯವನ್ನು ಮೇಲ್ವಿಚಾರಣೆ ಮಾಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.