ADVERTISEMENT

ವಿಶ್ವ ಯೂತ್‌ ವೇಟ್‌ಲಿಫ್ಟಿಂಗ್‌: ಭಾರತಕ್ಕೆ 2 ಕಂಚು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2023, 19:04 IST
Last Updated 26 ಮಾರ್ಚ್ 2023, 19:04 IST
   

ನವದೆಹಲಿ (ಪಿಟಿಐ): ಭಾರತದ ವೇಟ್‌ಲಿಫ್ಟರ್‌ಗಳಾದ ಧನುಷ್‌ ಲೋಗನಾಥನ್‌ ಮತ್ತು ಜೋಶ್ನಾ ಸಬರ್‌ ಅವರು ಅಲ್ಬೇನಿಯದ ಡರೆಸ್‌ನಲ್ಲಿ ನಡೆಯುತ್ತಿರುವ ಐಡಬ್ಲ್ಯುಎಫ್‌ ವಿಶ್ವ ಯೂತ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡರು.

ಶನಿವಾರ ರಾತ್ರಿ ನಡೆದ ಮಹಿಳೆಯರ 40 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ 14 ವರ್ಷದ ಜೋಶ್ನಾ ಅವರು ಒಟ್ಟು 115 ಕೆ.ಜಿ (ಸ್ನ್ಯಾಚ್‌ನಲ್ಲಿ 53 ಕೆ.ಜಿ+ ಕ್ಲೀನ್‌ ಮತ್ತು ಜರ್ಕ್‌ನಲ್ಲಿ 62 ಕೆ.ಜಿ) ಭಾರ ಎತ್ತಿದರು.

ಪುರುಷರ 49 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಧನುಷ್‌ ಒಟ್ಟು 200 ಕೆ.ಜಿ (88+ 112) ಭಾರ ಎತ್ತುವ ಮೂಲಕ ಮೂರನೇ ಸ್ಥಾನ ಪಡೆದರು. 16 ವರ್ಷದ ಅವರು ಸ್ನ್ಯಾಚ್‌ನಲ್ಲಿ ಬೆಳ್ಳಿ ಗೆದ್ದರು. ಫಿಲಿಪ್ಪೀನ್ಸ್‌ನ ಪ್ರಿನ್ಸ್‌ ಕೆ. ಡೆಲೊಸ್ ಸಂಟೊಸ್ ಮತ್ತು ಎರೊನ್ ಬೊರೆಸ್‌ ಅವರು ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಗೆದ್ದುಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.