ADVERTISEMENT

22ರಿಂದ ಕುಸ್ತಿ ಹಬ್ಬ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 20:00 IST
Last Updated 18 ಫೆಬ್ರುವರಿ 2020, 20:00 IST

ಧಾರವಾಡ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಭಾರತೀಯ ಶೈಲಿಯ ಕುಸ್ತಿ ಸಂಘದ ಸಹಯೋಗದಲ್ಲಿ ಇದೇ 22ರಿಂದ 25ರ ವರೆಗೆ ನಗರದ ಕರ್ನಾಟಕ ಕಾಲೇಜು ಮೈದಾನದಲ್ಲಿ ಕರ್ನಾಟಕ ಕುಸ್ತಿ ಹಬ್ಬ ಹಮ್ಮಿಕೊಂಡಿದೆ. ಇಲ್ಲಿ ಕುಸ್ತಿ ಹಬ್ಬ ಆಯೋಜನೆಯಾಗಿರುವುದು ಇದೇ ಮೊದಲು.

ದೇಶ ಹಾಗೂ ವಿದೇಶಗಳ 1,200ಕ್ಕೂ ಹೆಚ್ಚು ಪೈಲ್ವಾನರು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಅಜರ್‌ಬೈಜಾನ್, ಜಾರ್ಜಿಯಾ ಮತ್ತು ಇರಾನ್ ದೇಶಗಳ ಸ್ಪರ್ಥಿಗಳು ಪಾಲ್ಗೊಳ್ಳುತ್ತಿರುವುದು ವಿಶೇಷ. ಇದಕ್ಕಾಗಿ ಮೂರು ಅಖಾಡಗಳನ್ನು ಸಿದ್ಧಪಡಿಸಲಾಗುತ್ತಿದ್ದು, 30 ಪ್ರತ್ಯೇಕ ತೂಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಒಟ್ಟು ಬಹುಮಾನ ಮೊತ್ತ ₹80 ಲಕ್ಷ.

ಅಂತರರಾಷ್ಟ್ರೀಯ ಕುಸ್ತಿಪಟುಗಳಾದ ಗದುಗಿನ ಪ್ರೇಮಾ ಹುಚ್ಚಣ್ಣವರ, ಹಿಂದಿನ ವರ್ಷ ‘ಕರ್ನಾಟಕ ಕೇಸರಿ’ ಗೌರವ ಪಡೆದ ನೀನಾ ಸಿದ್ಧಿ, ಮಮತಾ ಕೆಲೋಜಿ, ಐಶ್ವರ್ಯ ದಳವಿ, ಸುನಿಲ್ ಪಡತಾರೆ ಪ್ರಮುಖ ಆಕರ್ಷಣೆ ಎನಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.