ADVERTISEMENT

ಬೆನ್ನು, ಸ್ನಾಯು ಬಲಕ್ಕೆ ಮಾರ್ಜಾಲಾಸನ

ಗೋಪಾಲಕೃಷ್ಣ ದೇಲಂಪಾಡಿ
Published 19 ಜನವರಿ 2020, 19:45 IST
Last Updated 19 ಜನವರಿ 2020, 19:45 IST
ಮಾರ್ಜಾಲಾಸನ
ಮಾರ್ಜಾಲಾಸನ   

ಈ ಆಸನಕ್ಕೆ ಬೆಕ್ಕಿನ ಹೆಸರನ್ನು ಇಡಲಾಗಿದೆ. ಸಂಸ್ಕೃತದಲ್ಲಿ ಮಾರ್ಜಾರಿ ಎಂದರೆ ಬೆಕ್ಕು ಆಸನ ಎಂದರೆ ಭಂಗಿಯಾಗಿದೆ. ಬೆನ್ನಿಗೆ ಅಗತ್ಯವಿರುವ ಚಲನೆಯನ್ನು ನೀಡುತ್ತದೆ.

ಅಭ್ಯಾಸ ಕ್ರಮ: ಜಮಖಾನದ ಮೇಲೆ ಮೊಣಕಾಲು ಮತ್ತು ಕೈಗಳನ್ನು ಊರಿ ನೆಲೆಸಬೇಕು. ಆನಂತರ ಉಸಿರನ್ನು ಬಿಡುತ್ತಾ ನಿಧಾನವಾಗಿ ಬಲ ಕಾಲನ್ನು ನೇರವಾಗಿಸಬೇಕು. ತಲೆಯನ್ನು ಸ್ವಲ್ಪ ಮೇಲೆತ್ತಿ ದೃಷ್ಟಿಯನ್ನು ನೇರವಾಗಿಸಬೇಕು. ಈ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಸಮ ಉಸಿರಾಟದಲ್ಲಿ ನೆಲೆಸಿ ವಿರಮಿಸಬೇಕು. ಹಾಗೆಯೇ ಎಡಗಾಲಿನಲ್ಲಿಯೂ ಅಭ್ಯಾಸ ಮಾಡಬೇಕು. ಈ ರೀತಿ ಎರಡು ಅಥವಾ ಮೂರು ಬಾರಿ ಅಭ್ಯಾಸ ನಡೆಸಿ. ಆಮೇಲೆ ವಿಶ್ರಾಂತಿ ಪಡೆಯಬೇಕು.

ಉಪಯೋಗಗಳು: ಬೆನ್ನು ಮೂಳೆ ವಿಸ್ತರಿಸುತ್ತದೆ, ಬಲಪಡಿಸುತ್ತದೆ. ನಮ್ಯತೆ ನೀಡುತ್ತದೆ. ಭುಜಗಳು ಮತ್ತು ಮಣಿಕಟ್ಟುಗಳು ಬಲಗೊಳ್ಳುತ್ತವೆ. ಜೀರ್ಣಕಾರಿ ಅಂಗಗಳನ್ನು ಮಸಾಜ್ ಮಾಡಿ ಸಕ್ರೀಯಗಳಿಸಲಾಗುತ್ತದೆ. ರಕ್ತ ಪರಿಚಲನೆ ಸುಧಾರಿಸುತ್ತದೆ. ಮನಸ್ಸಿಗೆ ವಿಶ್ರಾಂತಿ ದೊರಕುತ್ತದೆ. ಬೆನ್ನು ಮತ್ತು ಹೊಟ್ಟೆಯ ಸ್ನಾಯುಗಳನ್ನು ವಿಸ್ತರಿಸುತ್ತದೆ. ಕೈಗಳಿಗೆ, ಕಾಲುಗಳಿಗೆ, ಸೊಂಟಕ್ಕೆ ವ್ಯಾಯಾಮ ದೊರಕುತ್ತದೆ. ಕುತ್ತಿಗೆ ಸ್ನಾಯುಗಳಿಗೆ ಒಳ್ಳೆಯ ವ್ಯಾಯಾಮ ದೊರಕಿದಂತಾಗುತ್ತದೆ. ಈ ಅಸನವನ್ನು ಅಭ್ಯಾಸ ಮಾಡುವುದರಿಂದ ಗರ್ಭಿಣಿಯರಿಗೆ ಸುಲಭ ಪ್ರಸವವಾಗಲು ಹೆಚ್ಚಿನ ಸಹಕಾರಿಯಾಗುತ್ತದೆ. ಇದೊಂದು ಸರಳ ಸುಲಭ ಆಸನವಾಗಿದ್ದು, ಹೃದಯ ಶಾಂತತೆಗೆ ಉಪಯೋಗಕಾರಿಯಾಗಿದೆ.

ADVERTISEMENT

ವಿ.ಸೂ:ಯಾವುದೇ ರೀತಿಯ ತೀವ್ರ ಬೆನ್ನು ಅಥವಾ ಕುತ್ತಿಗೆ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ. ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.